ಕುಂದಾನಗರಿ ಬೆಳಗಾವಿ ಮುಕುಟಕ್ಕೆ ಮತ್ತೊಂದು ಗರಿ-ಅತೀ ಎತ್ತರದಲ್ಲಿ ಹಾರಾಡಲಿದೆ 110 ಮೀಟರ್ ಧ್ವಜ

ಜಿಲ್ಲಾ ಸುದ್ದಿ

ಟೀಂ ತ್ರಿಮಿತ್ರ ಬೆಳಗಾವಿ –

ಕುಂದಾನಗರಿ ಬೆಳಗಾವಿಯ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಲಿದೆ. ಹೌದು..ದೇಶದಲ್ಲೇ ಅತೀ ಎತ್ತರದಲ್ಲಿ ಹಾರಾಡಲಿರುವ 110 ಮೀಟರ್ ಎತ್ತರದ ಧ್ವಜ ಸ್ತಂಭದಲ್ಲಿ 9,600ಚದರ ಅಡಿಯ ರಾಷ್ಟ್ರ ಧ್ವಜವನ್ನು ನಾಳೆ ಅದಿಕೃತವಾಗಿ ಹಾರಿಸಲಾಗುತ್ತದೆ. ಈ ಮೂಲಕ ದೇಶದ ಅತೀ ಎತ್ತರದ ರಾಷ್ಟ್ರಧ್ವಜ ಲೋಕಾರ್ಪಣೆಗೊಳ್ಳಲಿದೆ. ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಧ್ವಜಾರೋಹಣ ಮಾಡುವ ಮೂಲಕ ಲೋಕಾರ್ಪಣೆ ಮಾಡಲಿದ್ದು, ಬೆಳಗಾವಿ ಉತ್ತರ ಶಾಸಕ ಫಿರೋಜ್ ಸೇಠ್ ಅವರ ಕನಸಿನ ಯೋಜನೆ ಇದಾಗಿದೆ.ನಗರದ ಕೋಟೆ ಕೆರೆ ಆವರಣದಲ್ಲಿ ಅಂದಾಜು 2.5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ದೇಶದ ಅತೀ ಎತ್ತರದ ರಾಷ್ಟ್ರ ಧ್ವಜ ನಾಳೆ ಲೋಕಾರ್ಪಣೆಗೊಳ್ಳಲಿದ್ದು  ಬರೋಬ್ಬರಿ 110 ಮೀಟರ್ ಎತ್ತರದ ಧ್ವಜಸ್ತಂಭ ಇದಾಗಿದ್ದು, ಐನೂರು ಕೆಜಿ ಭಾರದ ತ್ರಿವರ್ಣ ಧ್ವಜ ಈ ಸ್ತಂಭದ ಮೇಲೆ ಹಾರಾಡಲಿದೆ.

ಇನ್ನು ಸತತ ಐದು ತಿಂಗಳು ಪುಣೆ ಮೂಲದಕಾರ್ಮಿಕರು ಈ ಧ್ವಜ ಸ್ಥಂಭವನ್ನ ನಿರ್ಮಾಣ ಮಾಡಿದ್ದಾರೆ. ಕಳೆದ ವಾರ ಈ ಧ್ವಜವನ್ನ ಪ್ರಾಯೋಗಿಕವಾಗಿ ಹಾರಿಸಿದ್ದಾಗ, ಕುಂದಾನಗರಿ ಜನ, 110ಮೀಟರ್ ಎತ್ತರದಲ್ಲಿ ಹಾರಾಡಿದ ರಾಷ್ಟ್ರಧ್ವಜ ಕಂಡು ಪುಳಕಿತರಾಗಿದ್ದರು.ಈ ಧ್ವಜ ಕಾಮಗಾರಿಯನ್ನ 1.62 ಕೋಟಿ ರೂ. ವೆಚ್ಚದಲ್ಲಿ ಮಾಡಲಾಗಿದೆ. ಸುವರ್ಣ ವಿಧಾನಸೌಧದ ನಂತರ ಕುಂದಾನಗರಿ ಸಿಕ್ಕ ಎರಡನೇ ಕಿರಿಟ ಇದಾಗಿದೆ

ಒಟ್ನಲ್ಲಿ ಕುಂದಾನಗರಿ ಜನತೆ ಈ ಐತಿಹಾಸಿಕ ಕ್ಷಣಕ್ಕೊಸ್ಕರ ಕಾತುರದಿಂದ ಕಾಯುತ್ತಿದ್ದು. ಯಾವಾಗ ತ್ರೀವರ್ಣ ಧ್ವಜ ಆಗಸದಲ್ಲಿ ಸ್ವಚ್ಚಂದವಾಗಿ

 

 

ಹಾರುಡುತ್ತೊ… ಆ ಕ್ಷಣವನ್ನ  ನಾವ್ ಯಾವಾಗ ಕಣ್ತುಂಬಿಕೊಳ್ತೊವೋ ಅಂತಿದ್ದಾರೆ.

Leave a Reply

Your email address will not be published. Required fields are marked *