ಬೇಸಿಗೆಯಲ್ಲಿ ಹಕ್ಕಿಗಳಿಗೆ ಕಾಳು ಹಾಗೂ ನೀರನ್ನು ಒದಗಿಸಲು ಮುಂದಾದ ದೇಶಪಾಂಡೆ ಫೌಂಡೇಶನ್ ಲೀಡ್ ವಿದ್ಯಾರ್ಥಿಗಳು

ಜಿಲ್ಲಾ ಸುದ್ದಿ ದಾವಣಗೆರೆ

ಟೀಂ ತ್ರಿಮಿತ್ರ ದಾವಣಗೆರೆ – 

ನಗರದದೇಶಪಾಂಡೆ ಫೌಂಡೇಶನ್, ಲೀಡರ್ಸ್‍  ಎಕ್ಸಲರೇಟಿಂಗ್  ಡೆವಲೆಪ್‍ಮೆಂಟ್ ಪ್ರೋಗ್ರಾಮ್ ನ ಲೀಡ್ ವಿದ್ಯಾರ್ಥಿಗಳು ದಾವಣಗೆರೆ ನಗರದಆಯಕಟ್ಟಿನ ಪ್ರದೇಶಗಳಲ್ಲಿ ಬಿರು ಬೇಸಿಗೆಯಿಂದ ಬಳಲಿದ ಬಾನಾಡಿಗಳಿಗೆ  ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ಕಾಳುಗಳು ಮತ್ತು ನೀರನ್ನು ಹಾಕಿ ಮರಕ್ಕೆ ನೇತು ಹಾಕುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಹಳೆ ಪ್ಲಾಸ್ಟಿಕ್ ಬಾಟಲ್ ಮತ್ತು ಮನೆ ಮನೆಯಿಂದ ಸಂಗ್ರಹಿಸಿದ ಆಹಾರ ಧಾನ್ಯಗಳನ್ನ ಬಳಸಿದ ವಿದ್ಯಾರ್ಥಿಗಳು 

ಲೀಡ್ ವಿದ್ಯಾರ್ಥಿಗಳು ನಗರದ ,ವಿಶ್ವೇಶ್ವರಯ್ಯಉದ್ಯಾನವನ, ಪಿ.ಜೆಎಕ್ಸೆಟೆನಶನ ಹಾಗೂ ಕುವೆಂಪು ನಗರಗಳಲ್ಲಿ ಸಂಚರಿಸಿ ಮನೆ ಮನೆಯಿಂದಆಹಾರ ಧಾನ್ಯಗಳು ಮತ್ತು ಬಳಸಿದ ಹಳೆ ಪ್ಲಾಸ್ಟಿಕ್ ಬಾಟಲ್‍ಗಳಿಗೆ ಸಂಗ್ರಹಿಸಿ ಹೊಸ ರೂಪ ನೀಡಿ ಬಸವಳಿದ ಬಾನಾಡಿಗಳಿಗೆ ನೀರುಣಿಸುವಕಾಯಕದಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ಮಾತಾಡಿದ ಕಾರ್ಯಕ್ರಮ ಸಂಯೋಜಕ ಕೃಷ್ಣಾಜಿ ಮೋರೆ ” ಬೇಸಿಗೆಯ ಈ ದಿಗಳಲ್ಲಿ ಪರಿಸರ ಮತ್ತು ಪಕ್ಷಿ ಸಂಕುಲದರಕ್ಷಣೆ ಮಾಡುವುದು ನಮ್ಮಂತಹಯುವಕರಕಾರ್ಯ ಹಾಗೂ ಮಾನವೀಯತೆಯ ಪ್ರತೀಕಎಂದುಅಭಿಪ್ರಾಯಪಟ್ಟರು.”
ಈ ಅಭಿಯಾನದಲ್ಲಿ ಮಾತಾನಾಡಿದ ಲೀಡ್‍ನ ಸಹಾಯಕ ಸೊಯೋಜಕ ಸಂತೋಷಕುಮಾರ.ಪಿ,” ಮನುಷ್ಯರಾದರೆ ನೀರು ಕೇಳಿ ದಾಹಾ ತಿರಿಸಿಕೋಳ್ಳುತ್ತನೆ ಆದರೆ ಮೌನಿಯಾದ ಹಕ್ಕಿಗಳು ಯಾರನ್ನು ಬೇಡುವುದಿಲ್ಲಾಆದ್ದರಿಂದ ಪ್ರತಿ ಮನೆಯಚಾವಣಿ ಮೇಲೆ ಕಾಳು-ನೀರುಇಟ್ಟು ಹಕ್ಕಿಗಳ ರಕ್ಷಣೆಗೆ ಪ್ರತಿಯೊಬ್ಬರು ಕೈ ಜೋಡಿಸಿ ಮಾನವಿಯತೆ ಮೆರೆಯಬೇಕು ಎಂದರು “

ಇನ್ನು ಈ ಕಾರ್ಯಕ್ರಮದಲ್ಲಿ  ಲೀಡ್ ವಿದ್ಯಾರ್ಥಿಗಳಾದ ಧ.ರಾ.ಮ ಕಾಲೇಜ್ ನ ಕಾವ್ಯಾಆರಾಧ್ಯಮಠ, ದೀಪಿಕ  ಹಾಗೂ ಶ್ರೀಹರಿ, ಯು. ಬಿ. ಡಿ. ಟಿ. ಎಂಜಿನಿಯರಿಂಗ್‍ ಕಾಲೇಜ್ ನ ವಿದ್ಯಾರ್ಥಿ ರೋಹನ್‍, ಜೈನ್‍  ಎಂಜಿನಿಯರಿಂಗ್‍ಕಾಲೇಜ್‍ ನ ವಿದ್ಯಾರ್ಥಿ ಶರತ್‍  ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *