ಸಾಮಾಜಿಕ ಜಾಲ ತಾಣಕ್ಕು ತಟ್ಪಿದ ಚುನಾವಣೆ ನೀತಿ ಸಂಹಿತೆ – ಸೊಷಿಯಲ್ ಮೀಡಿಯಾ ದುರ್ಬಳಕೆ ಆಗದಂತೆ ಎಲೆಕ್ಷನ್ ಕಮಿಷನ್ ಹೊಸ ಪ್ಲಾನ್

ಜಿಲ್ಲಾ ಸುದ್ದಿ ಟೆಕ್ ಲೋಕ ಬಿಗ್3 ರಾಜಕೀಯ
  1. ಟೀಂ ತ್ರಿಮಿತ್ರ ಸ್ಪೆಷಲ್ –

ಹೌದು ಸ್ನೇಹಿತರೇ , 2018 ರ ಚುನಾವಣೆಯ ದಿನಾಂಕ ಪ್ರಕಟವಾಗಿದೆ ಅದರ ಬೆನ್ನಲ್ಲೇ ನೀತಿ ಸಂಹಿತೆಯು ಜಾರಿಗೆ ಬಂದಿದೆ . ಈ ಭಾರಿಯ ನೀತಿ ಸಂಹಿತೆಯು ಸಾಮಾಜೀಕ ಜಾಲತಾಣವನ್ನು ಬಿಟ್ಟಿಲ್ಲಾ . ಮುಖ್ಯವಾಗಿ ಫೇಸ್ ಬುಕ್ , ಟ್ವಿಟರ್ , ವಾಟ್ಸ್ ಪ್ , ಇನ್ಸ್ಟಗ್ರಾಮ್ , ಇನ್ನೂ ಮುಂತಾದ ಜಾಲತಾಣಗಳಲ್ಲಿ ನಡೆಯುತ್ತಿದ್ದ ಚುನಾವಣೆಯ ಪ್ರಚಾರವನ್ನು ಸಹ ನಿಷೇದಿಸಿದೆ . ಮುಂದುವರೆದು ಅಭ್ಯಾರ್ಥಿಯ ಪರ ಪೊಸ್ಟರ್ ಗಳನ್ನು ಹಾಕುವುದಾಗಲಿ ಅಥವಾ ಅಭ್ಯಾರ್ಥಿಯ ಪರವಾಗಿ ಪ್ರಚಾರ ಮಾಡುವುದಾಗಲಿ . ಇತರ ಪಕ್ಷದ ಅಭ್ಯಾರ್ಥಿಗಳನ್ನು ನಿಂದೀಸುವುದಾಗಲಿ ಮಾಡಬಾರದು ಎಂದು ಹೇಳಿದೆ . 2014 ರ ಲೋಕಸಭೆ ಚುನಾವಣೆಯು ಮುಖ್ಯವಾಗಿ ಸಾಮಾಜೀಕ ಜಾಲತಾಣವನ್ನು ಅವಲಂಬಿಸಿತ್ತು . ಅದರ ಸಧುಪಯೋಗವನ್ನು ಈ ಚುನಾವಣೆಯಲ್ಲಿ ಪಡೆಯಲು ವಿವಿದ ಪಕ್ಷಗಳು ತಮ್ಮ ಪಕ್ಷದ ಕಚೇರಿಯಲ್ಲೇ ಐಟಿ ಡಿಪಾರ್ಟ್ ಮೆಂಟ್ ತೆಗೆದು ಜಾಮಾಜೀಕ ಜಾಲತಾಣದ ಸಮರಕ್ಕೇ ಸಿದ್ದವಾಗಿದ್ದವು . ಆದರೇ ಕೇಂದ್ರ ಚುನಾವಣಾ ಆಯುಕ್ತರ ಈ ನಿರ್ದಾರ ವಿವಿದ ರಾಜಕೀಯ ಪಕ್ಷಗಳಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ .

ನೀವು ಕೂಡ ಅಷ್ಟೇ , ನಿಮ್ಮ ಫೇಸ್ ಬುಕ್ ಖಾತೆಗೆ ವಿವಿದ ಪಕ್ಷದ ಮುಖಂಡರ ಪರ ಬ್ಯಾಟ್ ಮಾಡುವಾಗ ಹುಷಾರಾಗಿರಿ . ಇತರ ಪಕ್ಷದ ಮುಖಂಡರನ್ನು ನಿಂದೀಸುವ ಮುಂಚೆ ಯೋಚಿಸಿ . ನೀವು ಕಮೆಂಟ್ ಮಾಡಿದ ಅಥವಾ ಅಪ್ ಲೋಡ್ ಮಾಡಿದ ಫೂಟೇಜ್ ಸ್ಕ್ರೀನ್ ಶಾಟ್ ತೆಗೆದು , ತಾಲೂಕಿನ ಅಥವಾ ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಕಳಿಸಿದರೇ ನಿಮ್ಮ ಕಥೆ ಮುಗಿದ ಹಾಗೆ. ನಿಮಗೆ ಬೇಲು ಸಿಗಲ್ಲಾ , ಪಾನಿಪೂರಿಯೂ ಸಿಗಲ್ಲಾ ..!

ಇವತ್ತಿನಿಂದ ಯಾರನ್ನು ಬೆಂಬಲಿಸಿ ಜಾಮಾಜೀಕ ಜಾಲತಾಣಗಳಲ್ಲಿ ಕುಸ್ತಿ ಮಾಡಲು ಹೋಗಬೇಡಿ . ನಿಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ತಂದುಕೊಳ್ಳಬೇಡಿ .

Leave a Reply

Your email address will not be published. Required fields are marked *