ಚಿತ್ರದುರ್ಗ –
ಕಾರಿಗೆ ಪೆಟ್ರೋಲ್ ಹಾಕಿಸಲು ಬಂದು ಪೆಟ್ರೋಲ್ ಬಂಕ್ ಸಿಬಂದಿಗಳಿಗೆ ಚಾಕು ತೋರಿಸಿ ಹಣ ಲಪಟಾಯಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ KR ಹಳ್ಳಿ ಬಳಿ ನಡೆದಿದೆ .
5 ಜನ ದುಷ್ಕರ್ಮಿಗಳು ತಮ್ಮ ಸ್ವಿಫ್ಟ್ ಕಾರಿಗೆ ಟ್ಯಾಂಕ್ ಫುಲ್ ಮಾಡಲು ಹೇಳಿ ದಿನವಿಡಿ ಸಂಗ್ರಹವಾಗಿದ್ದ 2 ಲಕ್ಷಕ್ಕು ಹೆಚ್ಚು ಹಣವನ್ನು ಬಂಕ್ ಸಿಬ್ಬಂದಿಗಳಿಗೆ ಚಾಕು ತೋರಿಸಿ ಲಪಟಾಯಿಸಿದ್ದಾರೆ , ಅಷ್ಟೆ ಅಲ್ಲದೆ ಅಲ್ಲೆ ಇದ್ದ ಸಿಸಿ ಕ್ಯಾಮೆರಾ ಮತ್ತು ಕಂಪ್ಯೂಟರ್ ಪುಡಿಪುಡಿ ಮಾಡಿ ತೆರಳಿದ್ದಾರೆ ,KR ಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಇಂಡಿಯನ್ ಆಯಿಲ್ ಪೆಟ್ರೋಲ್ ಬಾಂಕ್ ಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಚಿತ್ರದುರ್ಗ ಎಸ್ಪಿ ಕೆ ಅರುಣ್ ಮತ್ತು ಸಿಪಿಐ ಗುರುರಾಜ್ ಭೇಟಿ ಪರಿಶೀಲನೆ ನಡಿಸಿದ್ದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.