ಕಾರ್ಮಿಕ ಸಚಿವರ ಜಿಲ್ಲೆಯಲ್ಲಿ ಇದೆಂತ ಕಾರ್ಮಿಕ ಶೋಷಣೆ – ಜಿಲ್ಲೆಯ ಮರ್ಯಾದಿ ತೆಗೆಯಲು ಮುಂದಾದ್ರ ನಗಸಭೆ ಅಧಿಕಾರಗಳು

ಕ್ರೈಂ ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ :

ಕೋಟೆ ನಾಡು ಚಿತ್ರದುರ್ಗ  ನಗರದಲ್ಲಿ ಕಾರ್ಮಿನೊಬ್ಬನನ್ನು ಮ್ಯಾನ್​​ಹೋಲ್​ಗೆ ಇಳಿಸಿ ಸ್ವಚ್ಛಗೊಳಿಸಲಾಗಿರುವ ಘಟನೆ  ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲೆಯಲ್ಲೇ ಇಂತಹ ಘಟನೆ ನಡೆದಿದೆ.ನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿಯ ಮ್ಯಾನ್​ಹೋಲ್​ಗೆ ನಗರಸಭೆ ಅಧಿಕಾರಿಗಳು ಮಣಿ ಎಂಬ ಕಾರ್ಮಿಕನನ್ನು ಮ್ಯಾನ್ ಹೋಲ್​ಗೆ ಇಳಿಸಿ ಕ್ಲೀನ್ ಮಾಡಿಸಿದ್ದಾರೆ. ಆಧುನಿಕ ಯಂತ್ರಗಳಿದ್ದರೂ ಸಹ ಮ್ಯಾನ್​ಹೋಲ್ ಕ್ಲೀನ್ ಮಾಡಲು, ಕಾರ್ಮಿಕನನ್ನು ಗುಂಡಿಗೆ ಇಳಿಸಿ ನಗರಸಭೆ ಅಧಿಕಾರಿಗಳು ಅಮಾನವೀಯತೆ ಮೆರೆದಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಇಂತಹ ಹಲವು ಪ್ರಕರಣಗಳಿಗೆ ಶಿಕ್ಷೆಯಾದರೂ ನಗರಸಭೆ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಹಿಂದೆಯೂ ನಗರದ ಗಾಂಧಿ ವೃತ್ತದ ಬಳಿಯಿರುವ ಮ್ಯಾನ್​​ಹೋಲ್​ಗೆ ಕಾರ್ಮಿಕನನ್ನ ಇಳಿಸಿದ್ದ ಘಟನೆ ನಡೆದಿತ್ತು. ಇನ್ನು ಇದರ ಬಗ್ಗೆ ಪ್ರತಿಕ್ರಯಿಸಿರುವ ಸಾರ್ವಜನಿಕರು ನಮ್ಮ ಜಿಲ್ಲೆಯ ಮರ್ಯಾದಿಯನ್ನ ನಮ್ಮ  ಅಧಿಕಾರಿಗಳೆ ಕಳೆಯುತಿದ್ದಾರೆ ಎಂದು ಆರೋಪಿಸಿದ್ದಾರೆ ….

 

 

 

Leave a Reply

Your email address will not be published. Required fields are marked *