ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಎಲ್ಲಿಯವರೆಗೂ ಒಂದಾಗಲ್ವೋ ಅಲ್ಲಿಯವರೆಗೂ ಇವರು ಒಬ್ಬೊಬ್ಬರನ್ನ ವಿಂಗಡಿಸಿ ಬೇಟೆ ಆಡ್ತಾನೆ ಹೋಗ್ತಾರೆ.

ಸೋಷಿಯಲ್ ಮೀಡಿಯಾ

ತುಂಬಾ ದಿನದಿಂದ ಬರಿಬೇಕು ಅನ್ಕೊಂಡಿದ್ದೆ , ಆದ್ರೆ 

ದಿ!ಸಿದ್ದು ನ್ಯಾಮಗೌಡರ ಮಗ ಆನಂದ್ ನ್ಯಾಮಗೌಡರ ಹೇಳಿಕೆಯನ್ನು ಕೇಳಿದ ನಂತರ ಬರೆಯೋ ಅನಿವಾರ್ಯತೆ ಬಂತು.
ಒಂದು ದಿನ ಕಾಶಿ ಗಂಗಾತೀರದಲ್ಲಿ ವಿಶೇಷ ಪೂಜೆಯೊಂದು ನಡೆಯುತಿತ್ತು. ಈ ಘಟನೆ ಬ್ರಿಟಿಷರು ನಮ್ಮನ್ನು ಆಕ್ರಮಿಸಿಕೊಳ್ಳುವ ಮುಂಚಿನದು , ಆಕ್ರಮಿಸುವ ಮುಂಚೆ ಥಾಮಸ್ ಬೆಬಿಗ್ಟನ್ ಮೆಕಾಲೆ ಎನ್ನುವ ಬ್ರಿಟಿಷ್ ಅಧಿಕಾರಿ ಮತ್ತು ತನ್ನ ತಂಡ ಭಾರತವನ್ನು ಅಭ್ಯಷಿಸಲು ದೇಶದ ನಾನಾ ಭಾಗಗಳಲ್ಲಿ ಸರ್ವೇ ಮಾಡುತ್ತಾ ಇದ್ದರು ಆಗ ಮೆಕಾಲೆ ತಂಡದ ಅಧಿಕಾರಿಯೊಬ್ಬ ಗಂಗಾ ನದಿಯ ತಟದಲ್ಲಿ ನಡೆಯುತ್ತಿದ್ದ ಆ ಪೂಜೆಯ ವೇಳೆಗೆ ಅಲ್ಲಿಗೆ ಬಂದ, ಅಲ್ಲಿ ಸಾವಿರಾರು ಭಕ್ತರು ನೆರೆದಿದ್ದರು ಎಲ್ಲರೂ ಒಂದೇ ತರಹದ ಭಕ್ತಿ ಪೋಷಾಕುಗಳನ್ನು ಧರಿಸಿದ್ದರು ,ಒಂದೇ ಆಪೋಷಣಾ ಪದ್ಧತಿಯಿಂದ ಪೂಜೆಯನ್ನು ಮಾಡುತ್ತಿದ್ದರು. ಇದನ್ನ ನೋಡಿದ ಆ ಅಧಿಕಾರಿ ಅಲ್ಲಿಯ ಒಬ್ಬ ವ್ಯಕ್ತಿಗೆ ” ನೀವೆಲ್ಲ ಇಲ್ಲಿಗೆ ಏಕೆ ಬಂದಿದ್ದೀರಾ? ಎಂದು ಕೇಳಿದ ಅದಕ್ಕೆ ಇವತ್ತು ವಿಶೇಷ ಪೂಜೆ ಇದೆ ಅದಕ್ಕೆ ಬಂದಿದೀವಿ ಅಂದ , ಅದಕ್ಕೆ ಅಧಿಕಾರಿ – “ಇವತ್ತೇ ಶುಭದಿನ ಇದೆ ಅಂತ ಇಷ್ಟೂ ಜನಕ್ಕೆ ಯಾರ್ ಹೇಳಿದ್ದು ?”
“ನಮ್ ಪಂಡಿತರು ಹೇಳುದ್ರು ಅದ್ಕೆ ಬಂದ್ವಿ” ಅಂದ ಅದಕ್ಕೆ ಅಧಿಕಾರಿ “ಸರಿ ಆ ನಿಮ್ಮ ಪಂಡಿತರನ್ನು ತೋರಿಸು ಅಂದ”
ಆ ವ್ಯಕ್ತಿ ಅಧಿಕಾರಿಯನ್ನ ಪಂಡಿತರ ಮನೆಗೆ ಕರೆದುಕೊಂಡು ಹೋದ . ಅಲ್ಲಿ ದೇವರ ಫೋಟೋ, ಚಾಪೆ ಅದರ ಮೇಲೆ ಕಟ್ಟಿಗೆಯ ಸಣ್ಣ ಟೇಬಲ್ ಅದರ ಮೇಲೊಂದು ಪಂಚಾಂಗವನ್ನು ಹಿಡಿದು ಕುಳಿತಿದ್ದ ಒಬ್ಬ ಭ್ರಾಹ್ಮಣನನ್ನು ಕಂಡ ಆ ಅಧಿಕಾರಿ ನೋಡಿದವನೆ ಅಲ್ಲೇನು ಮಾತಾಡದೇ ವಾಪಸ್ ಬಂದ . ತನ್ನ ತನ್ನ ಡೈರಿಯಲ್ಲಿ ಹೀಗೆ ಬರೆದ .
ಯಕ್ಕಶ್ಚಿತ್ ಒಬ್ಬ ಪಂಡಿತ ತನ್ನ ಪಾಂಡಿತ್ಯದಿಂದ ಪಂಚಾಂಗದ ಆಧಾರದ ಮೇಲೆ ಸಾವಿರಾರು ಜನರನ್ನು ಒಂದೇ ವೇದಿಕೆಯಲ್ಲಿ ಕೂಡಿಸುತ್ತಾನೆ ಎಂದರೆ ,ನಾವು ಮೊದಲು ಈ ಪಾಂಡಿತ್ಯ , ಪಂಡಿತ, ಪಂಚಾಂಗಗಳನ್ನು ನಾಶಪಡಿಸಬೇಕು ಆಗ ಮಾತ್ರ ನಮ್ಮ ಒಡೆದು ಆಳುವ ನೀತಿಯಿಂದ ಭಾರತವನ್ನು ಕೈವಶಮಾಡಿಕೊಳ್ಳಲು ಸಾಧ್ಯ” ಹಿಂಗೆ ಬರೆದಿಡುತ್ತಾನೆ . ನಂತರ ನಡೆದದ್ದೇ ಇತಿಹಾಸ .

ಇಲ್ಲಿ ಹೇಳ ಬಯಸುವ ವಿಷಯ ಸಾಕಷ್ಟಿದೆ ಕೆಲವೊಂದನ್ನಷ್ಟೇ ಹೇಳುತ್ತೇನೆ . ಪಾಂಡಿತ್ಯ ಪಂಡಿತ ಪಂಚಾಂಗ ವೆಂದರೆ ಕೇವಲ ಭ್ರಾಹ್ಮಣಿಗರಿಗಷ್ಟೇ ಸೀಮಿತ ಅಲ್ಲ ಪಾಂಡಿತ್ಯ ಎಂದರೆ ಧರ್ಮದ ಬಗೆಗಿನ ಜ್ಞಾನ, ಪಂಡಿತರು ಎಂದರೆ ಧರ್ಮದ ಬಗ್ಗೆ ಉಪದೇಶಿಸುವ ಸಂತರು ಸ್ವಾಮಿಗಳು, ಪಂಚಾಂಗ ಎಂದರೆ ಧರ್ಮ ಗ್ರಂಥಗಳು, ವೇದ ಉಪನಿಷತ್ ಗಳು ಇವೆಲ್ಲವೂ ಭಾರತದ ಭಧ್ರ ಬೇರುಗಳು ಇವನ್ನು ಕತ್ತರಿಸಿದರೆ ಭಾರತದವೆಂಬ ಭವ್ಯ ಹೆಮ್ಮರ ಉರುಳುವುದು ನಿಶ್ಚಿತ ಎಂದು ಆಗಲೇ ಬ್ರಿಟಿಷರು ಮನಗಂಡಿದ್ದರು 18 ನೆ ಶತಮಾನದಿಂದ 2018 ಅಂದ್ರೆ ಇಲ್ಲಿಯವರೆಗೂ ಅದು ನಡೆದುಕೊಂಡೇ ಬರುತ್ತಿದೆ , ಪರಿಣಾಮ – ದಿನ ಬೆಳಗಾದರೆ ಟಿವಿ ,ನ್ಯೂಸ್ ಫೇಸ್ಬುಕ್ನಲ್ಲಿ ಬ್ರೇಕಿಂಗ್ ನ್ಯೂಸ್ ಗಳನ್ನ ನೋಡ್ತಾ ಇದೀವಿ ,ಕೊಲೆ ಸುಲಿಗೆ ಬಲಾತ್ಕಾರ ಅತ್ಯಾಚಾರ , ಅನೈತಿಕ ಚಟುವಟಿಕೆಗಳು ಮಾನವೀಯತೆಯನ್ನು ನಾಚಿಸುವ ವಿಕೃತ ಘಟನೆಗಳು ಇವೆಲ್ಲ ಅಂದು ನಮ್ಮ ಧರ್ಮದ ಬುಡಕ್ಕೆ ಬತ್ತಿ ಇಟ್ಟ ಮೆಕಾಲೆ ಪದ್ಧತಿಯಿಂದಲೇ ಹೊರತು ಮತ್ತ್ಯಾವುದರಿಂದಲೂ ಅಲ್ಲ. ಯಾವ ದೇಶದ ಮೂಲ ಅಸ್ಮಿತೆ ನಶಿಸಿ ಹೋಗುತ್ತದೆಯೂ ಆ ದೇಶ ನರಕ ಸದೃಶ್ಯವಾಗುತ್ತದೆ ಎನ್ನುವುದಕ್ಕೆ ತಾಜಾ ಉದಾಹರಣೆ ಇರಾನ್ ಇರಾಕ್.

ನನ್ನ ಲೇಖನದ ಅರ್ಥ ಕೇವಲ ಭ್ರಾಹ್ಮಣರೇ ಭಾರತದ ಅಸ್ಮಿತೆ ಅಂತಲ್ಲ , ಅಥವಾ ಹಿಂದುತ್ವ ಎಂದರೆ ಕೇವಲ ಭ್ರಾಹ್ಮಣರ ಸ್ವತ್ತು ಅಂತಾನೂ ಅಲ್ಲ ಹಿಂದುತ್ವ ಈ ದೇಶದ ಪ್ರತಿಯೊಬ್ಬ ಪ್ರಜೆಯ ರಕ್ತದಲ್ಲೂ ಅಡಗಿದೆ , ಆದರೆ ದೇಶವಿರೋಧಿಗಳಿಗೆ ಧರ್ಮ ವಿರೋಧಿಗಳಿಗೆ ಒಡೆದು ಆಳುವ ನೀತಿಯುಳ್ಳವರಿಗೆ ಎಲ್ಲರನ್ನು ಸೇರಿಸಿಕೊಂಡರೆ ಅವರ ಪ್ರಾಭಲ್ಯ ಹೆಚ್ಚಾಗುತ್ತದೆ. ಹಾಗಾಗಿ ಅವರನ್ನೆಲ್ಲ ಜಾತಿಯ ಹೆಸರಿನಲ್ಲಿ ಬೇರೆ ಬೇರೆ ಮಾಡಿ ಬೇಟೆಯಾಡುವ ಕುತಂತ್ರ ಅಷ್ಟೇ ಇದು. ಅಷ್ಟಾಗಿಯೂ ಭ್ರಹ್ಮಣರನ್ನ ಟಾರ್ಗೆಟ್ ಮಾಡೋದ್ರಿಂದ ತಮ್ಮ ಕೆಲಸವೂ ಸುಲಭ ಯಾಕಂದ್ರೆ ಭ್ರಾಹ್ಮರು ಇರೋದೆ 5% ಹಾಗಾಗಿ ಪ್ರತಿರೋಧ ಒದಗುವುದು ಅವಕಾಶ ಕಡಿಮೆ , ಹಾಗೆ ಅವರನ್ನು ದ್ವೇಷಿಸುವ ಜೊತೆ ಜೊತೆಗೆ ವೇದ, ಗ್ರಂಥಗಳನ್ನು ದ್ವೇಷಿಸಲು ಸಾಧ್ಯ. ಇನ್ನುಳಿದ ಜಾತಿಗಳು ತಮ್ಮ ಜಾತಿಗಳೇ ಶ್ರೇಷ್ಠ ಅನ್ನುವವರು ” ಅಯ್ಯೋ ಬಿಡಿ ಅವರು ಬೈದಿದ್ದು ಭ್ರಹ್ಮಣರಿಗೆ ಹೊರತು ನಮಗಲ್ಲ” ಎಂದು ಸುಮ್ಮನಾಗಿ ಬಿಡ್ತಾರೆ.
ಆದರೆ ಅವರ ದ್ವೇಷ ಇರುವುದು ಭ್ರಾಹ್ಮಣರ ಮೇಲಲ್ಲ ಹಿಂದುತ್ವದ ಮೇಲೆ , ಅವರನ್ನು ದ್ವೇಷಿಸುವ ಮೂಲಕ ಹಿಂದುತ್ವವನ್ನು ನಾಶಪಡಿಸುವ ಉದ್ದೇಶ. ಆದರೆ ಇದು ಆನಂದ್ ನ್ಯಾಮಗೌಡರಂತ ಕಂದಮ್ಮಗಳಿಗೆ ಗೊತ್ತಾಗುತ್ತಿಲ್ಲ ಅಥವಾ ಗೊತ್ತಿದ್ದು ಕೂಡ ಕಾಂಗ್ರೆಸ್ಸಿನ ಹಿಡನ್ ಏಜಂಡಾ ಮೂಲಕ ಅಧಿಕಾರ ಹಿಡಿಯಬೇಕು ಅನ್ನೋ ಹುನ್ನಾರವೋ ನಾ ಕಾಣೆ . ನಿನ್ನೆ ಕಾಂಗ್ರೆಸ್ಸಿನ ಹಸಿರು ರಕ್ತ ಅವರ ಬಾಯಿಂದ ಕಕ್ಕಿಯೇ ಬಿಟ್ಟಿತು. ಈಗ ಹೇಗಿದ್ದರೂ ಲಿಂಗಾಯತರು ಹಿಂದುಗಳಲ್ಲ , ದಲಿತರು ಹಿಂದೂಗಳಲ್ಲ, ಕುರುಬರು ಹಾಲುಮತವೇ ಶ್ರೇಷ್ಠ, ಇತ್ಯಾದಿ ಇತ್ಯಾದಿ ಅಂತೇಳಿ, ಎಷ್ಟೋ ಮನಸ್ಸುಗಳನ್ನು ಒಡೆದದ್ದಾಗಿದೆ. ಇವಾಗ ಭ್ರಾಹ್ಮಣರ ಪರ ಯಾರು ನಿಲ್ತಾರೆ ಯಾರೂ ಇಲ್ಲ ಅಬ್ಬಬ್ಬಾ ಅಂದ್ರೆ ಆ 5% ಭ್ರಾಹ್ಮಣರು ಇವರಿಗೆ ವೋಟ್ ಹಾಕಲಿಕ್ಕಿಲ್ಲ ಅಷ್ಟೇ ಹೋದರೆ ಹೋಗಲಿ ಬಿಡಿ ಅವರನ್ನು ಇವರ ವಿರುದ್ದ ಎತ್ತಿ ಕಟ್ಟಿದ್ದರ ಸಲುವಾಗಿ ಅವರನ್ನು ಬೈದರೆ ಇವರುಗಳೆಲ್ಲ ನಮಗೆ ವೋಟ್ ಹಾಕೆ ಹಾಕುತ್ತಾರೆ ಎನ್ನುವ ಐನಾತಿ ಪ್ಲಾನಿಂಗ್ .

ಇಷ್ಟೇ ಭ್ರಾಹ್ಮಣರ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಕಾಂಗ್ರೆಸ್ಸಿರ ಲೆಕ್ಕಾಚಾರ……ಬ್ರಾಹ್ಮಣರ ಪರವಾಗಿ ಅಂತಲ್ಲ ಯಾರೇ ಆಗಲಿ ಜಾತಿಯ ಮದ್ಯ ಬೆಂಕಿ ಹಚ್ಚಿ ಒಡೆದು ಆಳುವ ನೀತಿ ಅನುಸರಿಸುವ ಎಲ್ಲರಿಗೂ ನಮ್ಮ ಚಪ್ಪಲಿ ಸದಾ ಸಿದ್ಧವಿರುತ್ತವೆ.

ಎಂತಾ ತರ್ಡ್ ಕ್ಲಾಸ್ ಪಕ್ಷಕ್ಕೂ ತನ್ನದೇ ಆದ ತತ್ವ ಸಿದ್ದಾಂತ ಅಂತ ಒಂದಿರುತ್ತೆ , ಆದ್ರೆ ಈ ಕಾಂಗ್ರೆಸ್ ಎಂತಾ ತರ್ಡ್ ಕ್ಲಾಸ್ ಪಕ್ಷ ಅಂದ್ರೆ ಇದಕ್ಕೆ ತತ್ವ ಸಿದ್ದಾಂತಗಳೇ ಇಲ್ಲ. ಇದಕ್ಕಿರುವುದು ದೇಶ ಹಾಳಾದ್ರೂ ಪರವಾಗಿಲ್ಲ ಒಟ್ಟಿನಲ್ಲಿ ತಾನು ಅಧಿಕಾರ ಹಿಡಿಯಬೇಕು ಅನ್ನೋದು ಒಂದೇ , ಮುಸಲ್ಮಾನರ ಸಭೆಗಳಿಗೆ ಹೋದರೆ ಅಲ್ಲಿ ಹಿಂದೂ ವಿರೋಧಿ ಹೇಳಿಕೆ ಕೊಡೋದು , ಹಿಂದೂ ಬಹುಸಂಖ್ಯಾ ಇಲಾಖೆಗಳಲ್ಲಿ ಪ್ರಚಾರಕ್ಕೆ ಹೋದರೆ ಜೈ ಶ್ರೀ ರಾಮ ಅನ್ನೋದು.
ಕೆರಳದಲ್ಲಿ ಇದೆ ಕಾಂಗ್ರೆಸ್ ಪಕ್ಷ ಅಂದು ಒಸಾಮಾ ಬಿನ್ ಲಾಡೆನ್ ವೇಷ ಧರಿಸಿದ ವ್ಯಕ್ತಿಯನ್ನು ಹಿಡಿದು ವೋಟ್ ಕೇಳಿತ್ತು, ಈಗ ಮದ್ಯ ಪ್ರದೇಶದ ಚುನಾವಣೆಯಲ್ಲಿ ರಾಮ ಮಂದಿರ ರಥವನ್ನು ತೋರಿಸಿ ವೋಟ್ ಕೇಳ್ತಾ ಇದೆ. ಇವರಿಗೆ ಬೇಕಿರೋದು ಅಧಿಕಾರವೇ ಹೊರತು ತತ್ವ ಸಿದ್ದಾಂತಗಳಲ್ಲ , ಇದೆ ಆನಂದ್ ನ್ಯಾಮಗೌಡರು ತಮ್ಮ ಚುನಾವಣೆ ಸಭೆಗಳಲ್ಲಿ ಭಗವಾ ಧಜ ಬಳಸಿತ್ತು ಯಾಕಂದ್ರೆ ಜಮಖಂಡಿಯಲ್ಲಿ ಹಿಂದೂ ಸಂಘಟನೆಗಳ ಬಲ ಜಾಸ್ತಿ ಅದಕ್ಕೆ.

ಅದಕ್ಕೆ ಮಾರು ಹೋಗಿ ಕಾಂಗ್ರೆಸ್ ಗೆ ಮತ ನೀಡಿದ ಹಿಂದುಗಳು ಕೆರ ತಗೊಂಡು ಹೋಡ್ಕೊಬೇಕು ಅಷ್ಟೇ. ವ್ಯಕ್ತಿಯನ್ನು ಜಾತಿಯನ್ನು ನೋಡಿ ಮತಚಲಾಯಿಸುವ ಮತದಾರರು ಬುದ್ದಿ ಕಲಿಯಬೇಕು.
ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಎಲ್ಲಿಯವರೆಗೂ ಒಂದಾಗಲ್ವೋ ಅಲ್ಲಿಯವರೆಗೂ ಇವರು ಒಬ್ಬೊಬ್ಬರನ್ನ ವಿಂಗಡಿಸಿ ಬೇಟೆ ಆಡ್ತಾನೆ ಹೋಗ್ತಾರೆ.
ಇದು ಶತಸಿದ್ದ.

 

ಬರಹ=ವಿಠ್ಠಲ_ಮರಬಗಿ

Leave a Reply

Your email address will not be published. Required fields are marked *