“ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು”

ಸೋಷಿಯಲ್ ಮೀಡಿಯಾ

ಸ್ಪೆಷಲ್ ಡೆಸ್ಕ್ – 

ಒಂದೂರಲ್ಲಿ ಒಬ್ಬ ಸಾಹುಕಾರ ಇರುತ್ತಾನೆ ,ಆಗರ್ಭ ಶ್ರೀಮಂತ ಅವನಿಗೆ ಯಾವುದಕ್ಕೂ ಕಡಿಮೆ ಇರಲಿಲ್ಲ , ನಡತೆಯೂ ಉತ್ತಮವಾಗಿತ್ತು.

ಒಂದು ಸಲ ಸಾಹುಕಾರ ಸಂತೆಗೆ ಹೋಗಿರುತ್ತಾನೆ ಅಡಿಕೆ ಕೊಂಡುಕೊಳ್ಳಲು ಅಡಿಕೆ ಮಾರುವವನ ಹತ್ತಿರ ಬಂದು 100 ಗ್ರಾಮ್ ಅಡಿಕೆ ತೆಗೆದುಕೊಳ್ಳುತ್ತಾನೆ ಆ ಕಾಲದಲ್ಲಿ ಏನೊಂದು 2 ರು kg ಅಡಿಕೆ ಇದ್ದಿರಬಹುದು , ಅಡಿಕೆ ಮಾರುವವನಿಗೆ 10 ರು ನೋಟು ಕೊಡುತ್ತಾನೆ ಆದ್ರೆ ಅವನ ಹತ್ತಿರ 10 ರುಗೆ ಚಿಲ್ಲರೆ ಇರುವುದಿಲ್ಲ , ಚಿಲ್ಲರೆ ತರಲು ಪಕ್ಕದ ಅಂಗಡಿಗೆ ಹೋಗುತ್ತಾನೆ.

ಆಗ ಸಾಹುಕಾರ ಯಾರೂ ಇಲ್ಲವಲ್ಲ ಅಂಗಡಿಯಲ್ಲಿ ಎಂದು ಹಿಂದೆ ಮುಂದೆ ನೋಡದೆ ಒಂದು ಅಡಿಕೆಯನ್ನು ಕದ್ದು ಜೇಬಿಗೆ ಹಾಕಿಕೊಳ್ಳುತ್ತಾನೆ ಆದ್ರೆ ಅದೇ ಹೊತ್ತಿಗೆ ಅಡಿಕೆ ಮರುವ ವ್ಯಕ್ತಿ ಅದನ್ನ ನೋಡಿಬಿಡುತ್ತಾನೆ. ” ಅಯ್ಯೋ ಇದೇನು ಸಾಹುಕಾರ್ರೆ ಅಡಿಕೆ ಕಳ್ಳತನ ಮಾಡ್ತೀರಾ ?😱 ಕೇಳಿದ್ರೆ ಒಂದು ಅಡಿಕೆ ನಾನೇ ಕೊಡ್ತೀದ್ನಲ್ಲ, ನಿಮಗೇನು ಕಮ್ಮಿ ಯಕ್ಕಚ್ಚಿತ್ ಒಂದು ಅಡಿಕೆ ಕಳ್ಳತನ ಮಾಡುವಂತದ್ದು?” ಎಂದು ಕೇಳುತ್ತಾನೆ .
ಅಲ್ಲಿದ್ದ 4-5 ಜನ ಇದನ್ನೆಲ್ಲ ನೋಡುತ್ತಾರೆ. ಸಾಹುಕಾರನಿಗೆ ತೀವ್ರ ಮುಖಬಂಗವಾಗುತ್ತದೆ . ಅದ್ಯಾಕೋ ಗೊತ್ತಿಲ್ಲ ಅವನು ಬೆಕುಂತ ಮಾಡಿರಲ್ಲ ಕಳ್ಳತನ ಮಾಡುವ ಮನುಷ್ಯ ಅಲ್ಲ ಆತ ಆದರೆ ಯಾರೂ ಇಲ್ಲದೆ ಇರುವ ಗಳಿಗೆ ಯಾರು ನೋಡುವುದಿಲ್ಲ ಎನ್ನುವ ಧೈರ್ಯದ ಮೇಲೆ ಅವನಿಂದ ಆ ಚಿಕ್ಕ ಅಚಾತುರ್ಯ ನಡೆದು ಬಿಟ್ಟಿರುತ್ತದೆ.

ಸರಿ ಇದಾಗಿ 2-3 ದಿನಗಳಲ್ಲೇ ಇಡೀ ಊರಿನ ಜನಗಳೆಲ್ಲ ಇದರ ಬಗ್ಗೆಯೇ ಮಾತನಾಡಲು ಶುರು ಮಾಡುತ್ತಾರೆ ಎಲ್ಲಿ ನೋಡಿದರೂ ಸಾಹುಕಾರ ಒಂದು ಅಡಿಕೆ ಕದ್ದನಂತೆ ಮಾರಾಯ ,ಥೋ ಅವನಿಗೇನು ಬಂದಿದೆಯೋ ಏನೋ ಅಷ್ಟೊಂದು ಐಶ್ವರ್ಯ ಇದ್ರು. ಎಂದು ಊರ ತುಂಬಾ ಹರಡುತ್ತದೆ ಅಷ್ಟೇ ಅಲ್ಲ ಅಕ್ಕ ಪಕ್ಕದ ಹಳ್ಳಿಗಳಿಗೂ ಸುದ್ದಿ ಹರಡುತ್ತದೆ. ಸಾಹುಕಾರನ ಪತ್ನಿ ಕಾಯಿಪಲ್ಯೆ ತರಲು ಸಂತೆಗೆ ಹೋದರೆ ಅಲ್ಲೂ ಎಲ್ಲರೂ ಈಕೆಯ ಕಡೆಗೆ ನೋಡುವುದು ಮುಸಿ ಮುಸಿ ನಗೋದು , ನಡೀತಾ ಇರುತ್ತೆ ಹೆಂಡತಿ ಬಂದು ಸಾಹುಕಾರನಿಗೂ ಬೈಯ್ಯುತ್ತಾಳೆ ಊರಲ್ಲಿ ತಲೆ ತಗ್ಗಿಸುವ ಹಾಗೆ ಮಾಡಿಬಿಟ್ಟಿರಲ್ರಿ ಎಂದು.
ಹೀಗೆ ಕೆಲವೇ ದಿನಗಳಲ್ಲಿ ಸಾಹುಕಾರಣಿಗೆ “ಅಡಿಕೆ ಸಾಹುಕಾರ ಅಡಿಕೆ ಸಾಹುಕಾರ” ಅನ್ನೋ ಅಡ್ಡ ಹೆಸರು ಬಿದ್ದು ಬಿಡುತ್ತದೆ.
ಸಾಹುಕಾರನಿಗೆ ಇದೊಂದು ದೊಡ್ಡ ತಲೆನೋವಾಗಿ ಬಿಡುತ್ತದೆ ಹೇಗಾದರೂ ಮಾಡಿ ಈ ಘಟನೆಯನ್ನು ಜನರ ತಲೆಯಿಂದ ತಗೆಯಬೇಕಲ್ಲ ಎಂದು ಯೋಚಿಸುತ್ತಾನೆ ಆಗ ಒಂದು ಉಪಾಯ ಮಾಡುತ್ತಾನೆ.
ಸುತ್ತ ಹತ್ತು ಹಳ್ಳಿಯ ಜನರಿಗೆಲ್ಲ ಉಚಿತ ಭರ್ಜರಿ ಊಟ ಮಾಡಿಸಬೇಕು ಎಂದು ತೀರ್ಮಾನ ಮಾಡುತ್ತಾನೆ. ಸಾವಿರಾರು ರೂಪಾಯಿ ಖರ್ಚು ಮಾಡುವ ನಾನು ಜಿಪುಣ ಅಲ್ಲ ಕಳ್ಳನಲ್ಲ ಎಂದು ಸಾಬೀತು ಪಡಿಸಬೇಕು ಅಂದುಕೊಂಡು ಸುತ್ತ ಎಲ್ಲ ಹಳ್ಳಿಗಳಿಗೆ ಡಂಗುರ ಸಾರುತ್ತಾನೆ ಏನೆಂದು
” ಇಂತ ತರೀಖಿನ ದಿನ ನಮ್ಮ ಸಾಹುಕಾರರು ಎಲ್ಲಾ ಜನರಿಗೂ ಭಕ್ಷ ಭೋಜನ ಮಾಡಿಸುತ್ತಾರೆ ಎಲ್ಲರೂ ಬನ್ರಪ್ಪೋ”

ಸರಿ ವೇದಿಕೆ ಸಜ್ಜಾಯ್ತು ಎಲ್ಲ ಜನಗಳು ಬಂದ್ರು ಅವರನ್ನೆಲ್ಲ ಸಂಬೋದಿಸಿ ಸಾಹುಕಾರ ಹೇಳಿಕೆ ಕೊಡುತ್ತಾನೆ .
“ನೋಡಿ ಮಹಾಜನಗಳೇ ಅಂದು ನನ್ನಿಂದ ಅಪರಾಧ ವಾಗಿದೆ ಅದಕ್ಕೆ ಪ್ರಯಶ್ಚಿತ್ತವಾಗಿ ಇಂದು ನಾನು ಸಾವಿರಾರು ರೂಪಾಯಿ ಖರ್ಚು ಮಾಡಿ ನಿಮಗೆಲ್ಲರಿಗೂ ಭಕ್ಷ ಭೋಜನ ಮಾಡಿಸುತ್ತಿದ್ದೇನೆ ನಾನು ಜಿಪುಣನಲ್ಲ ಕಳ್ಳನಲ್ಲ ಹಾಗಾಗಿ ಇನ್ನು ಮುಂದೆ ಯಾರೂ ನನ್ನನ್ನ “ಅಡಿಕೆ ಸಾಹುಕಾರ ಅಡಿಕೆ ಕಳ್ಳ ” ಎನ್ನಬೇಡಿ ದಯವಿಟ್ಟು, ಆ ಶಬ್ದಗಳು ಯಾರೂ ಬಳಸಬೇಡಿ ಇಲ್ಲಿಗೆ ಬಿಟ್ಟುಬಿಡಿ’ ಎಂದು ಕೈ ಮುಗಿದು ವಿನಂತಿಸಿಕೊಳ್ಳುತ್ತಾನೆ.

ಜನಗಳು ಕೂಡ ಸಮ್ಮತಿಯಿಂದ ಆಯ್ತು ಎಂದು ಹೇಳಿ ಊಟಕ್ಕೆ ಕೂರುತ್ತಾರೆ. ಎಲ್ಲರೂ ಊಟ ಮಾಡುತ್ತಾರೆ ಸಾಹುಕಾರ ಕೂಡ ಜನಗಳಿಗೆ ಊಟ ಬಡಿಸುತ್ತ ಇರುತ್ತಾನೆ .

ಆಗ
ಅಲ್ಲಿಗೆ ಊಟಕ್ಕೆ ಬಂದಿರುವವರಲ್ಲಿ ದೂರದ ಗ್ರಾಮದವರು ಕೂಡ ಬಂದಿರುತ್ತಾರೆ .ಊಟಕ್ಕೆ ಕುಳಿತಿರುವಾಗ ಅದರಲ್ಲಿ ಒಬ್ಬ ಪಕ್ಕದವನಿಗೆ ಕೇಳುತ್ತಾನೆ ಅಣ್ಣಾ ಏನಿದು ಯಾರಿದೂ ಇಷ್ಟೊಂದು ಜನರಿಗೆ ಊಟ ಹಾಕಿಸ್ತಾ ಇದಾನಲ್ಲ ಏಕೆ.?

ಅದಕ್ಕೆ ಆ ಗ್ರಾಮಸ್ತ ಉತ್ತರಿಸುತ್ತಾನೆ ” ಓಹ್ ಇದಾ… ನಮ್ಮೂರ ಸಾಹುಕಾರ ಸಂತೇಲಿ ಅಡಿಕೆ ಕದ್ದಿದ್ದ ಅದಕ್ಕೆ ಪ್ರಾಯಶ್ಚಿತ್ತವಾಗಿ ಊಟ ಹಾಕಿಸ್ತಾ ಇದಾನೆ “

ಪರ ಗ್ರಾಮಸ್ತ-ಓಹ್ ಹೌದಾ ಸರಿ ಸರಿ.

ಇದನ್ನೆಲ್ಲ ಅಲ್ಲೇ ಹಿಂದೆ ನಿಂತು ಕೇಳುತ್ತಿದ್ದ ಸಾಹುಕಾರ ಪಿತ್ತ ನೆತ್ತಿಗೇರಿತ್ತದೆ😓

😄😄😄😄😄

ಮನೆಗೆ ಹೊರಡುವ ದಾರಿಯಲ್ಲಿಯೂ ಕೂಡ ಯಾರಾದ್ರೂ ಜನಗಳಿಗೆ ಎಲ್ಲಿಗೆ ಹೋಗಿಬಂದೆ ಎಂದು ಕೇಳಿದರೆ ” ಆ ಅಡಿಕೆ ಕದ್ದಿದ್ನಲ್ಲ ಸಾಹುಕಾರ ಅವನು ಇನ್ಮೇಲೆ ಯಾರು ಅಡಿಕೆ ಕಳ್ಳ ಅನಬಾರದು ಅಂತ ಊಟ ಹಾಕ್ಸಿದ್ದ ಅದ್ಕೆ ಹೋಗಿದ್ವಿ “
ಎನ್ನತೊಡಗಿದರು.
ಹೀಗೆ ಅಡಿಕೆ ಜೊತೆಗೆ ಅದನ್ನ ತೊಳೆಯಲು ಊರ ಜನರಿಗೆ ಊಟ ಹಾಕಿಸಿ ಇನ್ನಷ್ಟು ಪ್ರಚಾರ ಆಯ್ತು ಅಷ್ಟೇ ಹೊರತು ಆ ಹೆಸರು ಯಾರು ಮರೆಯಲೇ ಇಲ್ಲ.
😃😃😃😃😃😃😃😃😃😃😃😃
ಸಾಹುಕಾರ ಕೊನೆಯುಸಿರೆಳೆದನೆ ಹೊರತು ಆ ಅಡ್ಡ ಹೆಸರು ಹೋಗಲೇಲ್ಲ .

ಅಂದಿನಿಂದ “ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬಾರದು” ಎನ್ನುವ ಗಾದೆ ಮಾತು ರೂಢಿಗೆ ಬಂತು

Leave a Reply

Your email address will not be published. Required fields are marked *