ಜಗಳೂರಿನಲ್ಲಿ ಕಾಂಗ್ರೇಸ್ಸಿನ ಸದ್ಬಾವನ ಯಾತ್ರೆಗೆ ಚಾಲನೆ

ಜಗಳೂರು

ಮಹಾಗಾಂಧಿಜೀಯವರ 150ನೇ ಜನ್ಮ ದಿನಾಚರಣೆಯ ಪ್ರಯುಕ್ತ, ಜಗಳೂರು ನಗರದಲ್ಲಿಂದು ಜಗಳೂರು ತಾಲ್ಲೂಕು ಕಾಂಗ್ರೇಸ್ ವತಿಯಿಂದ ಸದ್ಬಾವನಾ ಯಾತ್ರೆಗೆ ಚಾಲನೆ ನೀಡಲಾಯಿತು.
ಸದ್ಬಾವನಾ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೇಸ್ಸಿನ ಮಾಜಿ ಶಾಸಕ ಹೆಚ್‌.ಪಿ.ರಾಜೇಶ್,ಶಾಂತಿಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯನ್ನು ಬದಿಗಿಟ್ಟು ಗಾಂಧಿಯನ್ನು ಕೊಂದ ನಾಥರಾಮ್ ಗೋಡ್ಸೆಯನ್ನು ಇಂದು ದೇಶದ ತುಂಬೆಲ್ಲಾ ಪ್ರಚಾರಮಾಡುತ್ತಿರುವುದು ದುಃಖದ ಸಂಗತಿಯಾಗಿದೆ ಎಂದಿದ್ದಲ್ಲದೆ,
ಕೇಂದ್ರ ಸರಕಾರ ದೇಶದಲ್ಲಿ ಜನರ ಮಧ್ಯೆ ಕೋಮುವಾದವನ್ನು ಸೃಷ್ಠಿಸುವುದರಲ್ಲಿ ನಿರತವಾಗಿದೆ ಹೊರತು ಈ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು ದೂರಿದರು.
ನಂತರ ಮಾತನಾಡಿದ ಜಗಳೂರು ತಾಲೂಕಿನ ದಲಿತ ಹೋರಾಟಗರ ಜಿ.ಹೆಚ್.ಶಂಭುಲಿಂಗಪ್ಪ ಅವರು ಇಂದು ದೇಶದಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳು ತಮ್ಮ ಜೀವನವನ್ನು ಭಯದ ವಾತಾವರಣ ದಲ್ಲಿ ದೂಡುವಂತಹ ಪರಿಸ್ಥಿತಿ ಯಾಗಿದೆ ದಲಿತರೆಂಬ ಕಾರಣಕ್ಕೆ ಒಬ್ಬ ಸಂಸದನನ್ನು ಪಕ್ಕದ ಜಿಲ್ಲೆ ಚಿತ್ರದುರ್ಗ ದಲ್ಲಿ ಬಿಜೆಪಿ ಸಂಸದನನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳದೆ ಅವಮಾನ ಮಾಡಿರುವುದು ಕೇದಕರ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹಮದ್, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ತಾಲ್ಲೂಕು ಯುವ ಘಟಕದ ಅಧ್ಯಕ್ಷ ಅಜಾಮುಲ್ಲಾ, ಗುತ್ತಿಗೆದಾರಾದ ಸುದೀರ್ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಈ ಯಾತ್ರೆ ಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *