Flash news|ಕೋಟೆ ನಾಡಿನಲ್ಲಿ ಸರಗಳ್ಳರ ಹಾವಳಿ

ಕ್ರೈಂ ಚಿತ್ರದುರ್ಗ ಜಿಲ್ಲಾ ಸುದ್ದಿ

ಚಿತ್ರದುರ್ಗ:

ಚಿತ್ರದುರ್ಗದಲ್ಲಿ ಸರಗಳ್ಳರ ಕೈಚಳಕ ಇಂದು ಜೋರಾಗಿದೆ ಒಂದೇ ಏರಿಯಾದಲ್ಲಿ ಎರಡು ಕಡೆ ಸರಗಳ್ಳತನ ನಡೆದಿದೆ. ಚಿತ್ರದುರ್ಗ ನಗರದ ಸಿಕೆ ಪುರ ಮುನಿಸಿಪಲ್ ಕಾಲೋನಿ ಗಣೇಶ ದೇವಸ್ಥಾನದ ಬಳಿ ಕಳ್ಳತನ ನಡೆದಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ಚೈನ್ ಕಳ್ಳರ ಫೋಟೋ

ಪ್ರೇಮಲೀಲಾ ಎಂಬ 60ವರ್ಷದ ವೃದ್ದೆಯ ಮಾಂಗಲ್ಯ ಸರ ಕದ್ದು ಪರಾರಿಯಾದ ಅರ್ಧ ಗಂಟೆ ಅವಧಿಯಲ್ಲೇ ಮತ್ತೊಂದು ಸರಗಳ್ಳತನ ನಡೆದಿದೆ.

ಎಸ್ಪಿ ಕಚೇರಿ ಸಮೀಪದ ತುರುವನೂರು ರಸ್ತೆ ಸೋಸಿಯಲ್ ಕ್ಲಬ್ ಬಳಿ ಸರಗಳ್ಳತನ ನಡೆದಿದೆ ಭಾರತಿ ಎಂಬ 60ವರ್ಷದ ಮತ್ತೊಬ್ಬ ವೃದ್ದೆಯ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾರೆ

ಹೆಲ್ಮೆಟ್ ಧರಿಸಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಖದೀಮರಿಂದ  ಕೃತ್ಯ

ಚಿತ್ರದುರ್ಗ ನಗರ ಹಾಗೂ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲು

Leave a Reply

Your email address will not be published. Required fields are marked *