ದಾವಣಗೆರೆ –
ಜ.3 ರಿಂದ 05 ವರೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಅಶೋಕ ಕ್ರೀಡಾ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಆಹ್ವಾನಿತ ಹೊನಲು-ಬೆಳಕಿನ ಪುರುಷರ ಖೋ-ಖೋ ಪಂದ್ಯಾವಳಿಯಲ್ಲಿ ದಾವಣಗೆರೆ ಕ್ರೀಡಾ ವಸತಿ ನಿಲಯದ ಪುರುಷರ ಖೋ-ಖೋ ತಂಡವು ತೃತೀಯ ಸ್ಥಾನ ಪಡೆದಿದೆ.
ಬಾಷಿತ್ ಆಲಿ, ಭರತ್ ಕುಮಾರ್, ಬಾಹುಬಲಿ, ವೀರೇಶ, ಲಕ್ಷ್ಮಣ, ಮಹಮ್ಮದ್ ತಾಸೀನ್, ಅರ್ಜುನ, ಕೃಷ್ಣ, ರಂಗಸ್ವಾಮಿ, ಪುನೀತ್ ಕುಮಾರ್ ಇವರುಗಳು ಉತ್ತಮ ಪ್ರದರ್ಶನ ನೀಡಿರುತ್ತಾರೆ. ಅರುಣ್ ಜೆ. ಬಿ. ಇವರು ಪಂದ್ಯಾವಳಿಯ ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಪಡೆದಿರುತ್ತಾರೆ. ಕ್ರೀಡಾಪಟುಗಳು ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ಇವರ ಬಳಿ ತರಬೇತಿ ಪಡೆದಿದ್ದರು.
ವಿಜೇತ ಕ್ರೀಡಾಪಟುಗಳಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ ಶ್ರೀನಿವಾಸ, ಅಧೀಕ್ಷಕರಾದ ಗ್ರೇಸಿ ಕೆ, ಇಲಾಖೆಯ ತರಬೇತುದಾರರಾದ ಜೆ.ರಾಮಲಿಂಗಪ್ಪ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.