ಕಿಚ್ಚ ಸುದೀಪ್ ಗೆ ಬಿಗ್ ರಿಲೀಫ್

ಜಿಲ್ಲಾ ಸುದ್ದಿ ಸಿನಿಮಾ ಅಡ್ಡ

ಚಿಕ್ಕಮಗಳೂರು :

ಕಿಚ್ಚ ಕ್ರಿಯೇಷನ್ಸ್ ನ ವಾರಸ್ದಾರ ಧಾರಾವಾಹಿ ಚಿತ್ರಿಕರಣದ ವೇಳೆ ವಂಚನೆ ಆರೋಪ ಹೊತ್ತಿದ್ದ ನಟ ಸುದೀಪ್ ಮೇಲಿನ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.

ಚಿಕ್ಕಮಗಳೂರು ತಾಲೂಕಿನ ಬೈಗೂರುನ ತಮ್ಮ ಎಸ್ಟೇಟ್ ನಲ್ಲಿ ದೀಪಕ್ ಮಯೂರ್ ಪಾಟೇಲ್ ವಾರಸ್ದಾರ ಧಾರಾವಾಹಿ ಚಿತ್ರೀಕರಣಕ್ಕೆ ತಮ್ಮ ಎಸ್ಟೇಟ್ ಹಾಗೂ ಮನೆಯನ್ನು ಒಪ್ಪಂದದ ಮೇರೆಗೆ ನೀಡಿದ್ದು ಈ ವೇಳೆ ಹಣ ನೀಡದೆ ವಂಚಿಸಿದ್ದಾರೆಂದು ನಟ ಸುದೀಪ್ ಹಾಗೂ ಮಹೇಶ್ ಸಂಜೀವ್ ವಿರುದ್ಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಅಂತಿಮ ವಿಚಾರಣೆ ಬಳಿಕ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಸುದೀಪ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದ ಸುಪ್ರೀಂಕೋರ್ಟ್ ವಕೀಲ ಗೋಪಿಪ್ರಕಾಶ್ ಚಿಕ್ಕಮಗಳೂರಿನಲ್ಲಿ ತಿಳಿಸಿದರು.
ದೀಪಕ್ ಅವರು ಸುಳ್ಳು ದೂರು ನೀಡುವ ಮೂಲಕ ಸುದೀಪ್ ಅವರ ವರ್ಚಸ್ಸಿಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆಂದು ಅವರು ಇದೇ ವೇಳೆ ತಿಳಿಸಿದರು.

Leave a Reply

Your email address will not be published. Required fields are marked *