Featured Video Play Icon

ಹೌದು ನಾವು ಕುಡ್ದಿದೀವಿ ಏನ್ ಇವಾಗ ? ಹಾಸನದ ಹೆಣ್ಮಕಳ ಗೋಳು

ಜಿಲ್ಲಾ ಸುದ್ದಿ ದೇಶ ರಾಜ್ಯ

ಹಾಸನ: ನಾನು ಸಿಕ್ಕಾಪಟ್ಟೆ ಕುಡಿದಿದ್ದೇವೆ. . ಏನ್ ಇವಾಗಾ. . ? ನೀವು ಪೋಲಿಸ್ ಆದರೆ ನಮ್ಮ ಮೈ ಮುಟ್ತೀರಾ. . ? ತಾಕತ್ತಿದೆಯಾ ನಿಮ್ಮ ಕೈಯಲ್ಲಿ. . . ? ನಮ್ಮನ್ನ ಅರೆಸ್ಟ್ ಮಾಡಿದ್ರಲ್ಲ. . . ಹಾಗೇ ನಮ್ಮ ಬಯಕೆಯನ್ನ ಕೂಡಾ ಫಿಲ್ ಮಾಡಿ. . . ಯಾಕೆ ನಿಮಗೆ ಗಂಡಸ್ತನವಿಲ್ವಾ. . . ? ಅಯ್ಯೋ ಇದೇನು ಹಿಂಗೆಲ್ಲ ಮಾತಾಡ್ತೀರಾ ಅನ್ಕೊತ್ತಿದ್ದೀರಾ. . ? ಮೇಲಿನ ಈ ಎಲ್ಲಾ ಪದಗಳು ನಾವು ಹೇಳುತ್ತಿರುವುದೆಲ್ಲ ಬದಲಿಗೆ ಪಾನಮತ್ತ ಮಧಿರೇಯರ ಬಾಯಿಂದ ಬಂದ ನುಡಿಮುತ್ತುಗಳು ಕಣ್ರೀ. . . ಅಷ್ಟಕ್ಕೂ ಈ ಪ್ರಕರಣ ಏನು. . . ? ನಡೆದಿದ್ದಾದ್ರು ಎಲ್ಲಿ ಅಂತೀರಾ ಆಗಿದ್ರೆ ಈ ಸ್ಟೋರಿ ನೋಡಿ . . . .

ಹಿಂಗೆ ಪಾನಮತ್ತರಾಗಿ ತೂರಾಡಿಕೊಂಡು ರಂಪಾಟ ಮಾಡುತ್ತಿರೋ ಈ ಇಬ್ಬರು ಯುವತಿಯರ ಹೆಸರು ಕವನ ಮತ್ತು ಭಾವನ ಅಂತ (ಗೌಪ್ಯತೆಯ ಸಂಬಂಧಕ್ಕಾಗಿ ಹೆಸರು ಬದಲಾಯಿಸಲಾಗಿದೆ) ಮೂಲತಃ ಹಾಸನ ಮತ್ತು ಶಿವಮೊಗ್ಗ ಮೂಲದವರು. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರದ ನಗರ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ನಡೆದ ಘಟನೆ ಇದಾಗಿದ್ದು, ಇವರಿಬ್ಬರ ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸುವುದರೊಳಗಾಗಿ ಪೋಲೀಸರಿಗೆ ಸಾಕ್ ಸಾಕಾಕಾಗಿದೆ. ರಾತ್ರಿಯಿಡಿ ಮಾಡಿ ರಂಪಾಟಕ್ಕೆ ಪೊಲೀಸ್ ಠಾಣೆಯ ಸಿಬ್ಬಂದಿಗಳು ಉತ್ತರಿಸಲಾಗದೇ ಮೌನಕ್ಕೆ ಜಾರಿದ್ದಾರೆ.

ಕೊರೋನಾ ವೈರಸ್ ಪ್ರಕರಣದಿಂದ ರಾಜ್ಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆಯ ಹಿನ್ನೆಲೆಯಲ್ಲಿ ಮೋಜು ಮಸ್ತಿ ಮಾಡೋಕೆ ಅಂತ ಸಕಲೇಶಪುರಕ್ಕೆ ಬಂದಿದ್ದಾರೆ. ನಗರದ ಹೊರಭಾಗದ ಚಾಮುಂಡೇಶ್ವರಿ ನಗರದ ನಿರ್ಜನ ಪ್ರದೇಶದಲ್ಲಿ ಈ ಯುವತಿಯರ ತಮ್ಮ ಪ್ರಿಯಕರರೊಂದಿಗೆ ಕಂಠಪೂರ್ತಿ ಕಡಿದು ಕುಣಿದು ಕುಪ್ಪಳಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಹುಡುಗೀರ ಕೂಗಾಟ, ಚೆಲ್ಲಾಟ, ರಂಪಾಟ ಕೇಳಿದ ಸ್ಥಳೀಯರು ತಕ್ಷಣ ಪೊಲೀಸ್ ಠಾಣೆಗೆ ವಿಚಾರ ಮುಟ್ಟಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿರುವ ಚಾಮುಂಡೇಶ್ವರಿ ಬಡಾವಣೆಯ ಸಮೀಪ ಬಂದಾಗ ಪೊಲೀಸರ ಕಂಡ ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅದ್ರಲ್ಲಿ ಜಾನೇಕೆರೆ ಮೂಲದ ಓರ್ವ ಕಾರು ಮಾಲೀಕ ಸಿಕ್ಕಿಬಿದ್ದಿದ್ದಾನೆ. ಇನ್ನು ಮೂರು ಮಂದಿ ಯುವಕರು ಪರಾರಿಯಾಗಿದ್ದಾರೆ.

ಇನ್ನು ಸಿಕ್ಕಿಬಿದ್ದ ಯುವಕನೊಂದಿಗೆ ಯುವತಿಯರನ್ನ ಪೊಲೀಸ್ ಠಾಣೆಗೆ ಕರೆತಂದಾಗ ಯುವತಿಯರ ಬಾಯಿಂದ ಬರುತ್ತಿದ್ದ ಒಂದೊಂದು ನುಡಿಮುತ್ತುಗಳ ಆರ್ಭಟ, ರಂಪಾಟವನ್ನ ತಿಳಿಗೊಳಿಸುವಷ್ಟರಲ್ಲಿ ಪೊಲೀಸರೇ ಸುಸ್ತಾಗಿ ಹೋಗಿದ್ದಾರೆ.

ಒಟ್ಟಾರೆ ಪಾನಮತ್ತ ಮಧಿರೇಯರ ರಂಪಾಟಕ್ಕೆ ಸಕಲೇಶಪುರ ಪೊಲೀಸರು ಅನುಭವಿಸಿದ ಪೀಕಳಾಟವನ್ನ ಹೇಳೋಕ್ಕಾಗದೇ ಕೊನೆಗೆ ಪೋಷಕರನ್ನ ಪತ್ತೆಮಾಡಿ ಸುರಕ್ಷಿತವಾಗಿ ಇಬ್ಬರನ್ನ ಅವರಿಗೆ ಒಪ್ಪಿಸಿದ್ದಾರೆ.

Leave a Reply

Your email address will not be published. Required fields are marked *