Featured Video Play Icon

ಸಂತೇಬೆನ್ನೂರು ಪೊಲೀಸರ ವಿನೂತನ ಕಾರ್ಯಕ್ರಮ – ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸರ ಐಡಿಯಾ ಏನು. ?

ಚನ್ನಗಿರಿ ಜಿಲ್ಲಾ ಸುದ್ದಿ ದಾವಣಗೆರೆ ಸಂತೇಬೆನ್ನೂರು

ಸಂತೇಬೆನ್ನೂರು-

ಲಾಕ್ ಡೌನ್ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ , ಪೊಲೀಸರು ವಿವಿಧ ರೀತಿಯ ಪ್ರಯೋಗಗಳನ್ನ ಮಾಡುತ್ತಿದ್ದಾರೆ ಆದ್ರೆ ಲಾಕ್‌ಡೌನ್‌ ಜಾಗೃತಿಗೆ ಸಂತೇಬೆನ್ನೂರು ಪೊಲೀಸರು ವಿನೂತನ ಪ್ರಯೋಗ ಮಾಡಿದ್ದಾರೆ ಏನಪ್ಪಾ ಆ ಐಡಿಯಾ ಅಂತೀರಾ ಮುಂದೆ ಓದಿ .

 

 

 

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನಲ್ಲಿಲಾಕ್‌ಡೌನ್‌ ಜಾಗೃತಿಗಾಗಿ  ಹಿಂದು, ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು

ಮಾಸ್ಕ್‌ ವಿತರಣೆ ಜತೆ, ಲಾಕ್‌ಡೌನ್‌ ಪಾಲನೆಗೆ ಮನವಿ ಮಾಡಿದರು ರಂಜಾನ್‌ ಉಪವಾಸದ ಪ್ರಾರ್ಥನೆ ಮನೆಯಲ್ಲಿ ಸಲ್ಲಿಸಲು ಸೂಚನೆ ನೀಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದಂತೆ ಸಲಹೆ ನೀಡಿದರು

ಸಾಮಾಜಿಕ ಅಂತರ ಕಾಪಾಡಿಕೊಂಡು ಕೇಂದ್ರ ಸರ್ಕಾರ ಲಾಕ್‌ಡೌನ್‌ ನಿಯಮ ಪಾಲಿಸಲು ಮನವಿ ಮಾಡಿದರು

ಸಂತೇಬೆನ್ನೂರಿನ ವಿವಿಧ ಬಡಾವಣೆಗಳಲ್ಲಿ ಕೂರೋನ  ಜಾಗೃತಿ ಬಗ್ಗೆ ಪಾಂಡೋಮಟ್ಟಿ ವಿರಕ್ತ ಮಠದ ಡಾ.ಗುರುಬಸವ ಸ್ವಾಮೀಜಿ, ಮೌಲಾನ ಮಹಮದ್‌ ಸಲೀಂ ದರವೇಶಿ, ಫಾದರ್‌ ಸಂತೋಷ್‌ ನೇತೃತ್ವದಲ್ಲಿ ಪಾದಯಾತ್ರೆ  ಮಾಡಲಾಯಿತು.

ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಆರ್‌.ಆರ್‌. ಪಾಟೀಲ್‌, ಪಿಎಸ್‌ಐ ಶಿವರುದ್ರಪ್ಪ ಮೇಟಿ  ಪಾದಯಾತ್ರೆ ಗೆ ಸಾಥ್ ನೀಡಿದರು.

Leave a Reply

Your email address will not be published. Required fields are marked *