ಎಟಿಎಸ್ ಎಲ್ಜಿಯಿಂದ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ

ಅಂಕಣಗಳು ಜಿಲ್ಲಾ ಸುದ್ದಿ ಟೆಕ್ ಲೋಕ ದೇಶ ರಾಜ್ಯ ಸೋಷಿಯಲ್ ಮೀಡಿಯಾ

ಬೆಂಗಳೂರು: ಭಾರತದ ಅಗ್ರಗಣ್ಯ ಗ್ಯಾರೇಜ್ ಸಾಧನಗಳ ಉತ್ಪಾದನೆ ಮತ್ತು ವಿತರಣಾ ಸಂಸ್ಥೆಯಾದ ಮತ್ತು ಎಲ್ಜಿ ಈಕ್ವಿಪ್‍ಮೆಂಟ್ಸ್ ಲಿಮಿಟೆಡ್‍ನ ಕಂಪ್ರೆಸ್ಡ್ ಏರ್ ಸೊಲ್ಯೂಶನ್ಸ್ ಸರಬರಾಜು ಅಂಗಸಂಸ್ಥೆಯಾದ ಎಟಿಎಸ್ ಎಲ್ಜಿ, ಹೊಸ ಶ್ರೇಣಿಯ ವಾಹನ ಕ್ರಿಮಿನಾಶಕ ಸೊಲ್ಯೂಶನ್ ಬಿಡುಗಡೆ ಮಾಡಿದೆ. ಈ ಓಝೋನ್ ಏರ್ ಸ್ಟೆರಿಲೈಸರ್, ಓಝೋನ್ (ಸಕ್ರಿಯ ಆಮ್ಲಜನಕದಿಂದ ಉತ್ಪಾದಿಸಿದ ತಾಜಾ ಉತ್ಪನ್ನ) ಬಳಸಿಕೊಂಡು ಬ್ಯಾಕ್ಟೀರಿಯಾ, ವೈರಸ್, ಮೌಲ್ಡ್ಸ್, ಅಲರ್ಜಿ ಕಣ, ದುರ್ವಾಸನೆ ಮತ್ತು ವೊಲೆಟೈಲ್ ಆರ್ಗಾನಿಕ್ ಕಾಂಪೌಂಡ್ (ವಿಓಸಿ)ನಂಥ ಹಾನಿಕಾರಕ ಮಾಲಿನ್ಯಕಾರಕ ಕಣಗಳನ್ನು ನಿರ್ಮೂಲನೆ ಮಾಡುತ್ತದೆ. ಈ ಮೂಲಕ ಸಣ್ಣ ಪ್ರಯಾಣಿಕ ಕಾರುಗಳು, ಸೆಡಾನ್‍ಗಳು, ಎಸ್‍ಯುವಿಗಳು, ಎಸ್‍ಸಿವಿ/ಎಚ್‍ಸಿವಿಯಂಥ ವಾಣಿಜ್ಯ ವಾಹನಗಳ ಚಾಲಕ ಕ್ಯಾಬಿನ್ ಮತ್ತು ಆ್ಯಂಬುಲೆನ್ಸ್‍ನ ಒಳಗಿನ ಪರಿಸರವನ್ನು ಸುರಕ್ಷಿತ ಹಾಗೂ ಸ್ವಚ್ಛವಾಗಿಡಲು ಸಹಕಾರಿಯಾಗಿದೆ.

ಲಾಕ್‍ಡೌನ್ ಸಡಿಲಿಕೆಯಾಗಿ ಜನತೆ ತಮ್ಮ ದೈನಂದಿನ ಕೆಲಸದ ವೇಳಾಪಟ್ಟಿಗೆ ವರ್ಗಾಂತರಗೊಳ್ಳುತ್ತಿದ್ದು, ಕಾರು ಅಥವಾ ವಾಹನಗಳಲ್ಲಿ ಮುಚ್ಚಿದ ವಾತಾವರಣದಿಂದಾಗಿ ಮಾಲಿನ್ಯಕಾರಕ ಅಂಶಗಳ ಅಪಾಯ ಕಡಿಮೆ ಇದೆ ಎಂಬ ಭಾವನೆ ಜನಸಾಮಾನ್ಯರಲ್ಲಿ ದಟ್ಟವಾಗಿದೆ. ಆದಾಗ್ಯೂ ಅಧ್ಯಯನಗಳ ಪ್ರಕಾರ, ಚತುಷ್ಕಕ್ರ ವಾಹನಗಳು ಸೋಂಕು ಒಯ್ಯುವ ಸಾಧ್ಯತೆ ಅಧಿಕ. ವಾಹನದ ಒಳಾಂಗಣದಲ್ಲಿ ಹಲವು ಎತ್ತರದ ಮೇಲ್ಮೈಗಳು, ಎಸಿ ಘಟಕ ಮತ್ತು ಕೆಳ ಸಂಪರ್ಕ ಭಾಗಗಳಾದ ಹೆಡ್‍ಲೈನರ್, ಹೆಡ್‍ರೆಸ್ಟ್ ಮತ್ತು ಕಿಟಕಿ ಗಾಜುಗಳಿದ್ದು, ವಾಹನಗಳು ಮಾಲಿನ್ಯಕಾರಕ ಅಂಶಗಳಿಂದ ಮುಕ್ತವಾಗಲು ಶುಚಿಗೊಳಿಸುವುದು ಅಗತ್ಯ.

ಎಟಿಎಸ್ ಎಲ್ಜಿ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ತಿವಾರಿ ಅವರ ಪ್ರಕಾರ, “ಇದು ಅತ್ಯಂತ ಅಸಾಧಾರಣ ಕಾಲಘಟ್ಟವಾಗಿದ್ದು, ಪ್ರಸ್ತುತ ಲಾಕ್‍ಡೌನ್‍ನಿಂದಾಗಿ ನಮ್ಮಲ್ಲಿ ಬಹುತೇಕ ಮಂದಿ ದಿನದ 24 ಗಂಟೆಯೂ ಮನೆಯೊಳಗೆಯೇ ಇರತ್ತೇವೆ. ನಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಮರಳಿದಾಗ ಕೋವಿಡ್-19 ಹರಡುವಿಕೆಯನ್ನು ತಡೆಯುವುದು ಅತಿ ಅಗತ್ಯ. ಎಟಿಎಸ್ ಎಲ್ಜಿ ಈ ನಿಟ್ಟಿನಲ್ಲಿ ನಮ್ಮ ಪ್ರತಿಯೊಬ್ಬ ಗ್ರಾಹಕರಿಗೂ ವಾಹನದೊಳಗೆ ಸ್ವಚ್ಛ ಹಾಗೂ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಸೊಲ್ಯೂಶನ್‍ಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ಓಝೋನ್ ಏರ್ ಸ್ಟೆರಿಲೈಸರ್ ನಮ್ಮ ಬದ್ಧತೆಯನ್ನು ಅನುಶೋಧನೆಯಾಗಿ ಪರಿವರ್ತಿಸಿದ್ದು, ಸಾಂಕ್ರಾಮಿಕೋತ್ತರ ವಿಶ್ವಕ್ಕೆ ಸುಲಲಿತ ವರ್ಗಾವಣೆಯನ್ನು ಇದು ಖಾತ್ರಿಪಡಿಸುತ್ತದೆ”

ಎಟಿಎಸ್ ಎಲ್ಜಿ ತಂಡವು ಓಝೋನ್ ಏರ್ ಸ್ಟೆಲಿಲೈಸರ್ ಸೊಲ್ಯೂಶನ್ ಅನ್ನು ಯಂತ್ರಗಳಿಗೆ ಸುಲಭವಾಗಿ ಬಳಸಲು, ಕಾಂಪ್ಯಾಕ್ಟ್, ಒಂದೆಡೆಯಿಂದ ಸುಲಭವಾಗಿ ಒಯ್ಯಲು ಮತ್ತು ಶೂನ್ಯ ನಿರ್ವಹಣೆ ಹಾಗೂ ಬಳಕೆಗೆ ಯೋಗ್ಯವಾಗುವಂತೆ ಮಾಡಿದೆ. ಮಧ್ಯಮ ಗಾತ್ರದ ಕಾರನ್ನು ಅಥವಾ ಎಸ್‍ಸಿವಿ, ಎಲ್‍ಸಿವಿ ಮತ್ತು ಎಚ್‍ಸಿವಿ ವರೆಗಿನ ವಾಣಿಜ್ಯ ವಾಹನಗಳ ಕ್ಯಾಬಿನ್‍ಗಳನ್ನು ಕೇವಲ 10 ನಿಮಿಷಗಳಲ್ಲಿ ಇದು ಸೋಂಕುಮುಕ್ತಗೊಳಿಸುತ್ತದೆ. ಅಂತೆಯೇ ಎಸ್‍ಯುವಿ ಅಥವಾ ವ್ಯಾನ್‍ಗಳನ್ನು 20 ನಿಮಿಷಗಳಲ್ಲಿ ಸಂಪೂರ್ಣ ಸೋಂಕುಮುಕ್ತಗೊಳಿಸುತ್ತದೆ. ಓಝೋನ್ ಏರ್ ಸ್ಟೆರಿಲೈಸರ್, ವಾಹನದ ಬ್ಯಾಟರಿ ಮೂಲಕ 12 ವಿ ಡಿಸಿ ವಿದ್ಯುತ್ ಬಳಸಿಕೊಂಡು,ನೈಸರ್ಗಿಕ ಗಾಳಿ ಅಥವಾ ಸಾಮಾನ್ಯ ಆಮ್ಲಜನಕ ಕಣಗಳನ್ನು ಓಝೋನ್ ಅಥವಾ ಓ3 ಕಣಗಳನ್ನಾಗಿ ಮಾರ್ಪಡಿಸುತ್ತದೆ. ಈ ಮೂಲಕ ಹಾನಿಕಾರಕ ಅಥವಾ ಕಣಗಳನ್ನು ಉಳಿಸುವ ಹೆಚ್ಚುವರಿ ರಾಸಾಯನಿಕಗಳ ಅಥವಾ ಸೋಂಕು ನಿವಾರಕಗಳ ಅಗತ್ಯತೆಯನ್ನು ಶೂನ್ಯಗೊಳಿಸುತ್ತದೆ.

ದಯವಿಟ್ಟು ಹೆಚ್ಚಿನ ತಿಳಿವಳಿಕೆಗಾಗಿ ಸಂಪರ್ಕಿಸಿ: ಟೋಲ್‍ಫ್ರೀ ಸಂಖ್ಯೆ- 1800-425-3544 ಅಥವಾ enquiry@ats-elgi.com  

ನಾವು ಕೋವಿಡ್ ನಂತರದ ವಿಶ್ವಕ್ಕೆ ಕೆಲವೇ ವಾರಗಳಲ್ಲಿ ನಾವು ಕಾಲಿಡುವ ಹಿನ್ನೆಲೆಯಲ್ಲಿ ಎಟಿಎಸ್ ಎಲ್ಜಿ, ಸಾರ್ವಜನಿಕ ಸ್ಥಳಗಳು, ಸೂಪರ್ ಮಾರ್ಕೆಟ್‍ಗಳು, ಶಾಪಿಂಗ್ ಮಾಲ್‍ಗಳು, ಸಿನಿಮಾ ಮಂದಿರಗಳು, ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಗಳನ್ನು ಸ್ವಚ್ಛಗೊಳಿಸುವುದನ್ನು ಗುರಿ ಮಾಡಿ ಹಲವು ವಿನೂತನ ಸೊಲ್ಯೂಶನ್‍ಗಳನ್ನು ಬಿಡುಗಡೆ ಮಾಡುತ್ತಿದೆ. ದ್ವಿಚಕ್ರ ವಾಹನ, ಕಾರು, ಬಸ್, ಟ್ರಕ್ ಮುಂತಾದ ಘನ ವಾಣಿಜ್ಯ ವಾಹನದ ಬಾಹ್ಯ ಭಾಗವನ್ನು ಸೋಂಕುರಹಿತಗೊಳಿಸುವ ಸೊಲ್ಯೂಶನ್ ಕೂಡಾ ಲಭ್ಯ.

Leave a Reply

Your email address will not be published. Required fields are marked *