ಕಾರ್ಗಿಲ್ ವಿಜಯ್ ದಿವಸ್ , ಸ್ವಾತಂತ್ರ್ಯ ದಿನಾಚರಣೆ,ರಕ್ಷಾಬಂಧನದ ಅಂಗವಾಗಿ ಲೀಡ್ ನಿಂದ ವಿಭಿನ ಕಾರ್ಯಕ್ರಮ

ಚಿತ್ರದುರ್ಗ ಜಿಲ್ಲಾ ಸುದ್ದಿ ದಾವಣಗೆರೆ

ಚಿತ್ರದುರ್ಗ :
ಅದು ನಮ್ಮ ದೇಶದ ಯೋಧರು ನಮ್ಮ ದೇಶಕ್ಕಾಗಿ ಪ್ರಾಣ ತೊರೆದ ದಿನ , ನಮ್ಮ ದೇಶದ ಸೈನ್ಯದ ಶಕ್ತಿಯನ್ನ ಜಗತ್ತಿಗೆ ತೋರಿಸಿದ ದಿನ
ಹೌದು ಅದುವೆ ಕಾರ್ಗಿಲ್ ಯುದ್ದದ ನೆನಪು ಕಾರ್ಗಿಲ್ ವಿಜಯ್ ದಿವಸ್ , ಈ ಕಾರ್ಗಿಲ್ ವಿಜಯೋತ್ಸವದ ದಿನದ ಅಂಗವಾಗಿ ಸರ್ಕಾರ ಹಾಗು ಅನೇಕ ಸಂಘ ಸಂಸ್ಥೆಗಳು
ಹಲವು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತವೆ ಆದ್ರೆ ಹುಬ್ಬಳ್ಳಿಯ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮವು ಕಾರ್ಗಿಲ್ ವಿಜಯ ದಿನ ಹಾಗೂ ಸ್ವತಂತ್ರ್ಯ ದಿನಾಚರಣೆ,ರಕ್ಷಾಬಂಧನದ ಅಂಗವಾಗಿ ಒಂದು ವಿಭಿನ್ನ ಕಾರ್ಯಕ್ರಮವನ್ನ ಹಮ್ಮಿಕೊಂಡಿದೆ ಆ ಕಾರ್ಯಕ್ರಮ ಏನು ಅಂತೀರ ಈ ಸ್ಟೋರಿ ಓದಿ

ಹೌದು ಕಾರ್ಗಿಲ್ ವಿಜಯ್ ದಿನ ಹಾಗೂ ಸ್ವತಂತ್ರ್ಯ ದಿನಾಚರಣೆ, .ರಕ್ಷಾಬಂಧನದ ಅಂಗವಾಗಿ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮವು ದೇಶದ ಯೋಧರನ್ನ ಬೆನ್ನುತಟ್ಟುವ , ಹುರಿದುಂಬಿಸುವ,ಗೌರವಿಸುವ ಸಲುವಾಗಿ
ವಿಭಿನ್ನ ಕಾರ್ಯಕ್ರಮವನ್ನ ಆಯೋಜಿಸಿದೆ , ಗ್ರೀಟಿಂಗ್ ಕಾರ್ಡ ಸಲ್ಲಿಸುವುದರ ಮೂಲಕ ಎಕ್ಸಪ್ರೆಸಿಂಗ್ ಗ್ರಾಟಿಟ್ಯೂಡ್ ಟು ಇಂಡಿಯನ್ ಆರ್ಮಿ ಎಂಬ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ.

ತ್ರಿವರ್ಣ ಬಣ್ಣಗಳಿಂದ ತಯಾರಿಸಿದ ಗ್ರೀಟಿಂಗ್ ಕಾರ್ಡಗಳು

ಕಾರ್ಯಕ್ರಮದ ವಿಶೇಷತೆ ಏನು ?
ಕಾರ್ಯಕ್ರಮದ ವಿಶೇಷತೆ ಎಂದರೆ ನಮಗೋಸ್ಕರ ದೇಶಕೋಸಕರ ದೇಶದ ಗಡಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ದೇಶ ರಕ್ಷಿಸುತ್ತಿರುವ ಯೋಧರಿಗೆ ಗೌರವ ಸಮರ್ಪಣೆಗಾಗಿ ರಾಖಿಗಳನ್ನ ಇಕೋ ಪ್ರೆಂಡ್ಲಿ ಧವಸ ಧಾನ್ಯಗಳಿಂದ ತಯಾರಿಸಿ ಅದರ ಜೊತೆಗೆ ಅವರಿಗೆ ಗ್ರೀಟಿಂಗ್ ಕಾರ್ಡ ಬರೆದು ಜೊತೆಗೆ ಅದರಲ್ಲಿರುವ ಕಾಳುಗಳನ್ನ ತಮ್ಮ ಪಾರ್ಕ,ಅಥವ ಇನ್ನಿತರೆ ಪ್ರದೇಶದಲ್ಲಿ ಹಾಕುವಂತೆ ಮನವಿಯನ್ನ ಮಾಡಿದ್ದಾರೆ

ಗ್ರೀಟಿಂಗ್ ಕಾರ್ಡ ಹಾಗೂ ರಾಖಿ ತಯಾರಿಕೆಯಲ್ಲಿ ನಿರತಳಾಗಿರುವ ಸರಸ್ವತಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಪೂಜ .ಪಿ.ಎನ್

ಚಿತ್ರದುರ್ಗದಿಂದ ತಯಾರಿಸಿದ ರಾಖಿ ಹಾಗು ಗ್ರೀಟಿಂಗ್ ಎಷ್ಟು ?

ಒಟ್ಟು 13 ಜನ ವಿದ್ಯಾರ್ಥಿಗಳು ಈ ಒಂದು ಚಟುವಟಿಕೆಯಲ್ಲಿ ಭಾಗವಹಿಸಿದ್ದಾರೆ 200 ರಾಖಿ ಹಾಗೂ 200 ಗ್ರೀಟಿಂಗ್ ಕಾರ್ಡಗಳನ್ನ ತಯಾರಿಸಲಾಗಿದೆ.

                                                                ಇಕೋ ಫ್ರೆಂಡ್ಲಿ ರಾಖಿಗಳು

ಸೈನಿಕರಿಗೆ ಪ್ರೋತ್ಸಾಹಿಸಲು , ಗೌರವಿಸಲು ಈ ಕಾರ್ಯಕ್ರಮ – ತನ್ವೀರ್ ತಾಜ್
ಮ್ಮ ದೇಶಕ್ಕಾಗಿಯೆ ಪ್ರಾಣ ತೊರೆಯುವ ನಮ್ಮನೆಲ್ಲ ಕಾಯುತ್ತಿರುವ ನಮ್ಮ ಸೈನ್ಯವನ್ನು ಪ್ರೋತ್ಸಾಹಿಸಿ ಅವರ ಸೇವೆಯನ್ನ ಗೌರವಿಸಲು ಈ ವೇದಿಕೆಯನ್ನ ವಿದ್ಯಾರ್ಥಿಗಳಿಗೆ ಕಲ್ಪಿಸಿದಿವಿ ಅದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ , ನಮ್ಮ ವಿದ್ಯಾರ್ಥಿಗಳಲ್ಲಿ ಸೈನಿಕರ ಮೇಲಿನ ಗೌರವ ಇನಷ್ಟು ಹೆಚ್ಚಿಸಿದೆ , ಅವರು ತಮ್ಮ ಭಾವನೆಗೆ ತಕ್ಕಂತೆ ಸೈನಿಕರಿಗೆ ಗೌರವವನ್ನ ಪತ್ರ ಬರೆಯುವುದರ ಮೂಲಕ ತಲುಪಿಸಿದ್ದಾರೆ ಎಂದು ಚಿತ್ರದುರ್ಗ ಲೀಡ್ ಕಾರ್ಯಕ್ರಮ ಸಂಯೋಜಕಿ ತನ್ವೀರ್ ತಾಜ್ ಸಂತಸ ಹಂಚಿಕೊಂಡರು .

ನಮ್ಮ ಈ ಕಾರ್ಯಕ್ರಮ ನಮ್ಮ ಸಂತಸ ಇಮ್ಮಡಿಗೊಳಿಸಿದೆ : ಪೂಜ ಡಿ.ಎಸ್.

      ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಜೆ.ಎಂಐ.ಟಿ ಕಾಲೇಜಿನ ವಿದ್ಯಾರ್ಥಿನಿ ಪೂಜ .ಡಿ.ಎಸ್

ಲೀಡ್ ಈ ಕಾರ್ಯಕ್ರಮ ಕಲ್ಪಿಸಿರುವುದಕ್ಕೆ ನಾನು ಚಿರಋಣಿ, ನನಗೆ ಸೈನಿಕರ ಬಗ್ಗೆ ಇನ್ನಷ್ಟು ಗೌರವ ಹೆಚ್ಚಿಸಿದೆ ಯೋಧರು ನಮಗೋಸ್ಕರ ದೇಶದ ಗಡಿಯಲ್ಲಿ ನಿಂತು ಪ್ರಾಣದ ಹಂಗು ತೊರೆದು ನಮ್ಮನ್ನ ಹಾಗು ಇಡೀ ಭಾರತ ದೇಶವನ್ನ ಕಾಯುತಿದ್ದಾರೆ , ಆ ಸೈನ್ಯದಲ್ಲಿ ನಮ್ಮ ಸೈನಿಕರನ್ನ ನನ್ನ ಸಹೋದರದರೆಂದು ಭಾವಿಸಿ ರಕಾ ್ಷಭಂಧನದ ಉಡುಗುರೆಯಾಗಿ ಎಕೋ ಫ್ರೆಂಡ್ಲಿ ರಾಖಿಯನ್ನ ನಾನು ತಯಾರಿಸಿ ಯೋಧರಿಗೆ ಕಳುಹಿಸಿದ್ದೇನೆ ಅವರಿಗೆ ನನ್ನ ಸಲಾಂ ಹಾಗು ನನ್ನ ಈ ಒಂದು ಕೆಲಸಕ್ಕೆ ಕೈ ಜೋಡಿಸಿದ ನನ್ನ ಸ್ನೇಹಿತರಿಗು ಧನ್ಯವಾದ ಎಂದು ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಲೀಡ್ ನಿ ಎಸ್.ಜೆ.ಎಂ.ಐ.ಟಿ ಕಾಲೇಜಿನ ವಿದ್ಯಾರ್ಥಿನಿ ಪೂಜ .ಡಿ.ಎಸ್.ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ

 

ಇನ್ನು ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಸೇರಿದಂತೆ ಇನ್ನುಳಿದ ಜಿಲ್ಲೆಗಳು ಸೇರಿ ಒಟ್ಟು 2000 ಕ್ಕು ಹೆಚ್ಚು ಗ್ರೀಟಿಂಗ್ ಕಾರ್ಡ ಹಾಗು ಇಕೋ ಪ್ರೆಂಡ್ಲಿ ರಾಖಿಯನ್ನ ತಯಾರಿಸಿ ಕಳುಹಿಸಲಾಗುತಿದೆ ಎಂದು ತಿಳಿದುಬಂದಿದೆ .

ಒಟ್ಟಾರೆಯಾಗಿ ದೇಶ್ಪಾಂಡೆ ಪ್ರತಿಷ್ಠಾನದ ಲೀಡ್ ಕಾರ್ಯಕ್ರಮ ಈ ರೀತಿಯಾಗಿ ಹಲವು ವಿಭಿನ್ನ ಕಾರ್ಯಕ್ರಮಗಳನ್ನ ನೀಡುತ್ತಾ ಬಂದಿದೆ , ವಿದ್ಯಾರ್ಥಿಗಳಲ್ಲಿ ಈ ಕಾರ್ಯಕ್ರಮದ ಮುಖಾಂತರ ದೇಶದ ಸೈನಿಕರ ಬಗೆಗಿನ ಗೌರವ , ಪ್ರೀತಿ , ಇನ್ನು ಹೆಚ್ಚಾಗುತಿದೆ ಎಂದರೆ ತಪ್ಪಾಗಲಾರದು .

ಹೆಚ್ಚಿನ ಮಾಹಿತಿಗಾಗಿ www.leadcampus.org       ಗೆ ಭೇಟಿ ನೀಡಿ

 

Leave a Reply

Your email address will not be published. Required fields are marked *