ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಮತ್ತು ಗುಮಾಸ್ತರ ನೇಮಕಾತಿ ಪರೀಕ್ಷೆಗೆ ಆನ್‍ಲೈನ್ ತರಬೇತಿ

ಜಿಲ್ಲಾ ಸುದ್ದಿ ಟೆಕ್ ಲೋಕ ಬಿಗ್3 ರಾಜ್ಯ ಸೋಷಿಯಲ್ ಮೀಡಿಯಾ

ಧಾರವಾಡ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ “ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ”ದ ವತಿಯಿಂದ ಐ.ಬಿ.ಪಿ.ಎಸ್ ರಾಷ್ಟ್ರೀಕೃತ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ಒಂಬತ್ತು ಸಾವಿರ ಅಧಿಕಾರಿಗಳ ಮತ್ತು ಗುಮಾಸ್ತರ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಆನ್‍ಲೈನ್‍ನಲ್ಲಿ ನೀಡಲು ಆಯೋಜಿಸಿದೆ.
ಆಸಕ್ತರು ಆಗಸ್ಟ್ 07, 2020 (ರಜಾ ದಿನಗಳನ್ನು ಹೊರತುಪಡಿಸಿ) ರೊಳಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು 0821-2515944 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದೆಂದು ಕರಾಮುವಿ ಕುಲಸಚಿವರಾದ ಪ್ರೊ. ಲಿಂಗರಾಜ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *