ಬೆಂಗಳೂರು :
ನಾನು ನನ್ನ ಹುಟ್ಟು ಹಬ್ಬ ಆಚರಿಸಿಕೊಳ್ಳುವಿದಿಲ್ಲ ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ
ವ್ಯರ್ಥ ಮಾಡಬೇಡಿ ಹೀಗಂತ ಹೇಳಿದ್ದು ಕರುನಾಡ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ , ಹೌದು
ಇಂದು ತಮ್ಮ ಫೇಸ್ಬುಕ್ ನಲ್ಲಿ ಲೈವ್ ಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ,ಈ ಭಾರಿ ಹುಟ್ಟು ಹಬ್ಬ ಆಚರಿಸಿಕೊಳಲ್ಲ ,
ದಯವಿಟ್ಟು ಅನವಷ್ಯಕವಾಗಿ ನೀವು ಕಷ್ಟ ಪಟು ದುಡಿದಿರುವ ದುಡ್ಡನ್ನ ವ್ಯರ್ಥ ಮಾಡಬೇಡಿ ಅಂತ ಹೇಳಿದರು ಇನ್ನು ಅದರ ಜೊತೆಗೆ
ರಾಬರ್ಟ ಬಿಡುಗಡೆ ಬಗ್ಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ ಇದೇ ಮಾರ್ಚ 11 ಕ್ಕೆ ರಾಬರ್ಟ ತೆರೆಗೆ ಬರಲು ಸಿದ್ದವಾಗಿದೆ
ಮಹಾಶಿವರಾತ್ರಿ ಹಬ್ಬಕ್ಕೆ ರಾಬರ್ಟ ಚಿತ್ರವನ್ನ ಅಭಿಮಾನಿಗಳಿಗೆ ಕೊಡುಗೆಯಾಗಿ ನೀಡಲಿದ್ದೇವೆ ಎಂದರು .
ಓಟಿಟಿಯಲ್ಲಿ ಬರಲ್ಲ ಚಿತ್ರಮಂದಿರದಲ್ಲೆ ಚಿತ್ರ ತೆರೆಗೆ
ಅಭಿಮಾನಿಯ ಪ್ರಶ್ನೆಗೆ ಲೈವನಲ್ಲಿ ಉತ್ತರಿಸಿದ ದರ್ಶನ್ ಓಟಿಟಿಯಲ್ಲಿ ನಾವು ಬರುವುದಿಲ್ಲ
ನಾವು ಚಿತ್ರಮಂದಿರದಲ್ಲೆ ರಾಬರ್ಟ ಬಿಡುಗಡೆ ಮಾಡಲಿದ್ದೇವೆ , ಓಟಿಟಿಯಲ್ಲಿ ಸಿನಿಮಾ ನೋಡುವುದು
ನಿಮಗೆ ಮಜಾ ಕೊಡುವುದಿಲ್ಲ , ಅದೇ ರೀತಿಯಾಗಿ ನಿರ್ಮಾಪಕ ಕಷ್ಟ ಪಟ್ಟು ಬಂಡವಾಳ ಹೋಡಿ ಸಿನಿಮಾ
ನಿರ್ಮಿಸಿರುತ್ತಾನೆ ಆದ್ರೆ ಅವರಿಗೆ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆದ್ರೆ ಅವರಿಗೆ ಕಷ್ಟ ಆಗುತ್ತೆ ಅಂತ ನಿರ್ಮಾಪಕರ ಬೆನ್ನಿಗೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಂತಿದ್ದಾರೆ
ಅಂಬಾನಿ 5 ಜಿಯಿಂದ್ದ ಚಿತ್ರಮಂದಿರಗಳು ತೆರೆಯುತಿಲ್ಲ
ಇನ್ನು ಅಂಬಾನಿಯ ಜಿಯೋ ಬಗ್ಗೆ ಗರಂ ಆದ ದರ್ಶನ್ ಚಿತ್ರಮಂದಿರಗಳು ಪೂರ್ಣವಾಗಿ ತೆರೆಯದಿರಲು ಮುಖ್ಯ
ಕಾರಣ ಅಂಬಾನಿಯ 5 ಜಿ ಜಿಯೋ ಅಂತ ಅಸಮದಾನ ಹೊರ ಹಾಕಿದರು .