Featured Video Play Icon

ಚಿತ್ರದುರ್ಗ ನಗರಕ್ಕೆ ಆಗಮಿಸಿದ ಕೋವಿಡ್ ವ್ಯಾಕ್ಸಿನ್

ಚಿತ್ರದುರ್ಗ ಜಿಲ್ಲಾ ಸುದ್ದಿ ದಾವಣಗೆರೆ ದೇಶ ರಾಜ್ಯ ಶಿವಮೊಗ್ಗ

ಚಿತ್ರದುರ್ಗ :
ಇಡೀ ಜಗತ್ತನ್ನೆ ತಲ್ಲಣಗೊಳಿಸಿದ್ದ ಕೋವಿಡ್ ಮಹಾಮಾರಿಗೆ ಕೊನೆಗೊ ಅಂತ್ಯ ಹಾಡುವ ಕಾಲ ಬಂದಂತಿದೆ , ಈಗಾಗಲೆ ಭಾರತ ಸರ್ಕಾರ ಕೋವಾಕ್ಸಿನ್
ಹಾಗೂ ಭಾರತ್ ಬಯೋಟೆಕ್ ನ ಕೋವಿ ಶೀಲ್ಡ್ ಬಳಕೆಗೆ ಅನುಮತಿ ನೀಡಿದ್ದು ಕೊವಾಕ್ಸಿನ್ ಈಗಾಗಲೆ ರಾಷ್ಟ್ರದ ಎಲ್ಲಾ ರಾಜ್ಯ ಹಾಗೂ ಜಿಲ್ಲೆಗಳಿಗು ಕಳುಹಿಸುವ ಕಾರ್ಯ ನಡೆಯುತಿದೆ
ಅಂದಹಾಗೆ ಕೋಟೆ ನಾಡು ಚಿತ್ರದುರ್ಗಕ್ಕು ಕೋವಿಡ್ ವಾಕ್ಸಿನ್ ನಿನ್ನೆ ರಾತ್ರಿ ತಲುಪಿದೆ , ಜಿಲ್ಲಾಧಿಕಾರಿ ಕವಿತ ಮನ್ನಿಕೇರಿ , ಡಿ.ಎಚ್.ಓ ಪಾಲಾಕ್ಷ ಉಪಸ್ಥಿತಿಯಲ್ಲಿ ಡಿ.ಎಚ್.ಓ ಕಛೇರಿ ಆವರಣದ ಆರೋಗ್ಯ ಆಂಜನೇಯ
ದೇವಸ್ಥಾನದ ಬಳಿ ಪೂಜೆ ಸಲ್ಲಿಸುವ ಮುಖಾಂತರ ವಾಕ್ಸಿನ್ ತುಂಬಿದ ವಾಹನವನ್ನ ಬರಮಾಡಿಕೊಂಡರು . ರಿಜನಲ್ ವಾಕ್ಸಿನ್ ಸ್ಟೋರ್ ನಲ್ಲಿ ವಾಕ್ಸಿನ್ ಸಂಗ್ರಹ ಮಾಡಲಾಗಿದ್ದು ಚಿತ್ರದುರ್ಗ,ಶಿವಮೊಗ್ಗ, ದಾವಣಗೆರೆ,ಬಳ್ಳಾರಿಗೆ ಸೇರಿದ ವಾಕ್ಸಿನ್ ಅನ್ನು ಸಂಗ್ರಹಿಸಿ ಇಡಲಾಗಿದೆ , ಒಟ್ಟು 79.500 ಡೋಸ್ ಅನ್ನು ಸಂಗ್ರಹಿಸಿ ಇಡಲಾಗಿದ್ದು .ಇಂದು ಬೆಳ್ಳಗೆ ಇತರೆ ಜಿಲ್ಲೆಗಳಿಗೆ ಚಿತ್ರದುರ್ಗದ ರೀಜನಲ್ ಸೆಂಟರ್ ನಿಂದ ತಲುಪಿಸುವ ಕಾರ್ಯ ನಡೆದಿದೆ , ಜನವರಿ 16 ರಂದು ದೇಶಾದ್ಯಂತ ಕೋವಿಡ್ ವಾರಿಯರ್ಸ್ ಗೆ ವಾಕ್ಸಿನ್ ನೀಡಲು ಆರೋಗ್ಯ ಇಲಾಖೆ ಸಕಲ ತಯಾರಿ ನಡೆಸಿದೆ , ಏನೇ ಆದರು ಹಲವು ಅನಾಹುತ ಹಾಗು ಅಹಿತಕರ ಘಟನೆಗಳು ನಡೆದ ನಂತರ ಸಂಜೀವಿನಿಯಾಗಿ ಬಂದಿರುವ ವಾಕ್ಸಿನ್ ನಲ್ಲಿ ಸರ್ಕಾರ ಹಾಗೂ ಮಂತ್ರಿಗಳು ಹಗರಣ ಮಾಡದೆ ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ನಡೆದರೆ ಸೂಕ್ತ ಎಂದು ಜನಸಾಮಾನ್ಯರ ಅಭಿಪ್ರಾಯವಾಗಿದೆ .

Leave a Reply

Your email address will not be published. Required fields are marked *