ವಿವಾದಾತ್ಮಕ ಬೌಂಡರಿ ಕೌಂಟ್ ಕುರಿತು ಚರ್ಚಿಸಲು ಮುಂದಾದ ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ

ಟೀಂ ಇಂಡಿಯಾ ಮಾಜಿ ನಾಯಕ, ಕನ್ನಡಿಗ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ, ವಿವಾದಾತ್ಮಕ ಬೌಂಡರಿ ಕೌಂಟ್ ಸೇರಿದಂತೆ ಇನ್ನೂ ಹತ್ತು ಹಲವು ನಿಯಮಗಳ ಬಗ್ಗೆ ಮುಂದಿನ ಮೀಟಿಂಗ್‌ನಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಐಸಿಸಿ ಮುಖ್ಯ ವ್ಯವಸ್ಥಾಪಕ ಜೆಫ್ ಅಲ್ಲಾರ್ಡೀಸ್ ಹೇಳಿದ್ದಾರೆ. ಕುಂಬ್ಳೆ ನೇತೃತ್ವದ ತಜ್ಞರ ಸಮಿತಿಯು ಐಸಿಸಿ 2019ರ ವಿಶ್ವಕಪ್ ಫೈನಲ್‌ನಲ್ಲಿ ಉಂಟಾದ ಗೊಂದಲದ ತೀರ್ಮಾನಗಳು ಸೇರಿದಂತೆ ಕ್ರಿಕೆಟ್‌ನ ಇನ್ನಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದವರು ಹೇಳಿದ್ದಾರೆ. ಬಾಲ್ ಔಟ್ […]

ಇನಷ್ಟು ಓದಿ

ಟೇಕ್ವಾಂಡೋ ತರಬೇತಿ ಪಡೆಯುವುದರಿಂದ ಆತ್ಮ ರಕ್ಷಣೆ ಮಾಡಿಕೊಳ್ಳಲು ಸಹಾಯವಾಗುತ್ತದೆ -ಸರಸ್ವತಿ ಕಾನೂನು ಕಾಲೇಜಿನ ದೈಹಿಕ ನಿರ್ದೇಶಕ ಪಿ.ಸಿ.ಮುರುಗೇಶ್‌ ಹೇಳಿಕೆ

ಚಿತ್ರದುರ್ಗ: ಟೇಕ್ವಾಂಡೋ ತರಬೇತಿ ಪಡೆಯುವುದರಿಂದ ಆತ್ಮರಕ್ಷಣೆ ಮಾಡಿಕೊಂಡು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಹಾಯವಾಗಲಿದೆ ಎಂದು ಸರಸ್ವತಿ ಕಾನೂನು ಕಾಲೇಜಿನ ದೈಹಿಕ ನಿರ್ದೇಶಕ ಪಿ.ಸಿ.ಮುರುಗೇಶ್ ತಿಳಿಸಿದರು. ಸರಸ್ವತಿ ಟೇಕ್ವಾಂಡೋ ಅಕಾಡೆಮಿ ಹಾಗೂ ದಾಸ್ ಸ್ಪೋಟ್ರ್ಸ್ ಅಕಾಡೆಮಿಯಿಂದ ಇತ್ತೀಚೆಗೆ ನಡೆದ ಟೇಕ್ವಾಂಡೋ ಬೆಲ್ಟ್ ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಸರಸ್ವತಿ ಕಾನೂನು ಕಾಲೇಜಿನಲ್ಲಿ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಮಾತನಾಡಿದರು. ಟೇಕ್ವಾಂಡೋ ಅಂತರಾಷ್ಟ್ರೀಯ ತರಬೇತುದಾರರಾದ ಮಾಸ್ಟರ್ ಕನಕದಾಸ್‍ರವರು ಉಚಿತವಾಗಿ ಮಕ್ಕಳಿಗೆ ಟೇಕ್ವಾಂಡೋ ತರಬೇತಿ ನೀಡುತ್ತಿದ್ದಾರೆ ಎಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು. […]

ಇನಷ್ಟು ಓದಿ

ಕನ್ನಡದ ಕೋಟ್ಯಾಧಿಪತಿಯ ಮೊದಲ ಸ್ಪರ್ದಿ ಯಾರು ? ಗೆದ್ದ ಮೊತ್ತವೆಷ್ಟು ?

ಸಿನಿಮಾ ವಿಭಾಗ- ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಷೋ ಕನ್ನಡದ ಕೋಟ್ಯಾಧಿಪತಿ ಇಂದಿನಿಂದ ಮತ್ತೆ ಪುನಾರಂಭವಾಗಿದೆ. ಮೊದಲ ಎರಡು ಸೀಸನ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರೂಪಣೆಯಲ್ಲಿ ಬಾರೀ ಜನಪ್ರಿಯತೆ ಪಡೆದಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ಮೂರನೇ ಸೀಸನ್ನಿನಲ್ಲಿ ರಮೇಶ್ ಅರವಿಂದ್ ಅವರ ನಿರೂಪಣೆ ಮೂಲಕ ಮೂಡಿಬಂದಿತ್ತು. ಆದರೆ ಇದೀಗ ಮತ್ತೆ ನಾಲ್ಕನೇ ಸೀಸನ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಪವರ್ ಫುಲ್ ನಿರೂಪಣೆಯಲ್ಲಿ ಇಂದಿನಿಂದ ಆರಂಭವಾಗಿದ್ದು ಮೊದಲ ದಿನವೇ ವೀಕ್ಷಕರ ಮೆಚ್ಚುಗೆ ಪಡೆದಿದೆ. […]

ಇನಷ್ಟು ಓದಿ

ಆಂಗ್ಲರ ನೆಲದಲ್ಲಿ ಪಾಪಿಸ್ತಾನಕ್ಕೆ ಇಂಗ್ಲೀಷ್ ಕಲಿಸಿಕೊಡುತ್ತಾ ಕೊಹ್ಲಿ ಪಡೆ..?

ಮ್ಯಾಂಚೆಸ್ಟರ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂಗ್ಲೆಂಡ್‍ನ ಮ್ಯಾಂಚೆಸ್ಟರ್‌ನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಸರ್ಜಿಕಲ್ ಸ್ಟ್ರೈಕ್ ನೋಡಲು ಸಿಲಿಕಾನ್ ಸಿಟಿಯ ಮಂದಿ ಕೂಡ ಕಾತುರದಿಂದ ಕಾದು ಕುಳಿತಿದ್ದಾರೆ. ಭಾರತ -ಪಾಕಿಸ್ತಾನ ವಿಶ್ವಕಪ್ ಕ್ರಿಕೆಟ್ ಸಮರಕ್ಕೆ ಮ್ಯಾಂಚೆಸ್ಟರ್‌ನ ಮೈದಾನ ಸಿದ್ಧವಾಗಿದೆ. ಇಂಗ್ಲೆಂಡ್‍ನಲ್ಲಿ ನಡೆಯುವ ಪಂದ್ಯವನ್ನು ಲೈವ್ ನೋಡಲು ಸಿಲಿಕಾನ್ ಸಿಟಿ ಮಂದಿ ಕೂಡ ಕಾತರರಾಗಿದ್ದಾರೆ. ಭಾನುವಾರ ರಜೆ ಬೇರೆ, ಶಾಪಿಂಗ್, ಮಾಲ್ ರೌಂಡ್ಸ್ ಎಲ್ಲದಕ್ಕೂ ಬ್ರೇಕ್ ಹಾಕಿ ಮ್ಯಾಚ್ ನೋಡುವ ತಯಾರಿಯಲ್ಲಿದ್ದಾರೆ. ನಗರದ ಗಲ್ಲಿಗಲ್ಲಿಗಳಲ್ಲಿ […]

ಇನಷ್ಟು ಓದಿ

ಇಂಡೋ-ಪಾಕ್ ಫೈಟ್: ಮಳೆ ಬರುತ್ತಾ..? ಇಲ್ಲಿದೆ ನೋಡಿ ಹವಾಮಾನ ವರದಿ

ಮ್ಯಾಂಚೆಸ್ಟರ್[ಜೂ.15]: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನಕ್ಕೆ ಇಲ್ಲಿನ ಓಲ್ಡ್ ಟ್ರಾಫೋರ್ಡ್ ಮೈದಾನ ಸಾಕ್ಷಿಯಾಗಲಿದೆ. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದ ಉಭಯ ತಂಡಗಳು ಮತ್ತೊಮ್ಮೆ ಕಾದಾಡಲು ಸಜ್ಜಾಗಿವೆ. ಇದುವರೆಗೂ ವಿಶ್ವಕಪ್ ಟೂರ್ನಿಯಲ್ಲಿ ಉಭಯ ತಂಡಗಳು 6 ಬಾರಿ ಮುಖಾಮುಖಿಯಾಗಿದ್ದು, ಭಾರತ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಪ್ರಾಬಲ್ಯ ಮೆರೆದಿದೆ. ಈ ಹೈವೋಲ್ಟೇಜ್ ಮ್ಯಾಚ್ ಕಣ್ತುಂಬಿಕೊಳ್ಳಲು 60 ಸಾವಿರ ರುಪಾಯಿಗೂ ಹೆಚ್ಚು ಹಣ ನೀಡಿ ಅಭಿಮಾನಿಗಳು ಟಿಕೆಟ್ ಖರೀದಿಸಿದ್ದಾರೆ. ಆದರೆ ಇವೆಲ್ಲವುದರ ನಡುವೆ ಭಾನುವಾರ ಮ್ಯಾಂಚೆಸ್ಟರ್‌ನಲ್ಲಿ ಮಳೆ […]

ಇನಷ್ಟು ಓದಿ

ಯುವರಾಜನ ದರ್ಬಾರ್ ಅಂತ್ಯ 😑😶

ಮುಂಬೈ: ಟಿ-20 ಕ್ರಿಕೆಟ್‍ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದ ಎಡಗೈ ಸ್ಫೋಟಕ ಆಟಗಾರ ಯುವರಾಜ್ ಸಿಂಗ್ ಎಲ್ಲ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳಿದ್ದಾರೆ. ಇಂಗ್ಲೆಂಡಿನಲ್ಲಿ ವಿಶ್ವಕಪ್ ಪಂದ್ಯ ನಡೆಯುತ್ತಿರುವ ಸಂದರ್ಭದಲ್ಲಿ 2011ರ ವಿಶ್ವಕಪ್ ಸರಣಿ ಶ್ರೇಷ್ಠ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದ ಯುವರಾಜ್ ಹೋಟೆಲಿನಲ್ಲಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ಈ ಕಾರ್ಯಕ್ರಮದಲ್ಲಿ ಯುವರಾಜ್ ಸಿಂಗ್ ತನಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳು, ಟ್ರೋಫಿಗಳು, ಸ್ಮರಣಿಕೆಗಳು, ಬ್ಯಾಟ್ ಮತ್ತು ತಮ್ಮ 12ನೇ ನಂಬರಿನ ಜೆರ್ಸಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಈ […]

ಇನಷ್ಟು ಓದಿ

ಗಂಭೀರ್ ಹೇಳಿಕೆಗೆ ವಿರಾಟ್ ಕೊಹ್ಲಿ ಟಾಂಗ್!

ನವದೆಹಲಿ: ಐಪಿಎಲ್ ಟೈಟಲ್ ಗೆಲುವಿನ ಬಗ್ಗೆ ತಮ್ಮನ್ನು ವಿಶ್ಲೇಷಣೆ ಮಾಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಹೇಳಿಕೆಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿ ಟಾಂಗ್ ನೀಡಿದ್ದಾರೆ. ಕೆಲವರು ಮನೆಯಲ್ಲಿಯೇ ಕೂತು ಕ್ರಿಕೆಟ್ ಬಗ್ಗೆ ತಿಳಿಯದವರಂತೆ ಮಾತನಾಡುತ್ತಾರೆ. ನಾನು ಕೂಡ ಟೈಟಲ್ ಗೆಲ್ಲಬೇಕೆಂದೇ ಬಯಸುತ್ತೇನೆ. ಅದಕ್ಕೆ ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಆದರೆ ಐಪಿಎಲ್ ಟೈಟಲ್ ಗೆದ್ದ ಮಾತ್ರಕ್ಕೆ ಯಾವುದೇ ಆಟಗಾರನ ಸಾಮಥ್ರ್ಯದ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ. ನನ್ನಿಂದ ಸಾಧ್ಯವಾದಷ್ಟು ಟೈಟಲ್ ಗೆಲುವಿಗೆ […]

ಇನಷ್ಟು ಓದಿ

ಬಿಸಿಸಿಐ ವಿರುದ್ಧ ಐಸಿಸಿಗೆ ದೂರು ನೀಡಿದ್ದ ಪಾಕ್‍ಗೆ ಬಿತ್ತು ಭಾರೀ ದಂಡ

ದುಬೈ: ಪಾಕಿಸ್ತಾನ ಕ್ರಿಕೆಟ್ ನಿಯಂತ್ರಣ ಮಂಡಳಿ ಐಸಿಸಿಯಲ್ಲಿ ಬಿಸಿಸಿಐ ವಿರುದ್ಧ ದೂರಿನ ಪ್ರಕರಣದಲ್ಲಿ ಸೋಲುಂಡಿದ್ದು,ಪರಿಣಾಮ 1.6 ಮಿಲಿಯನ್ ಡಾಲರ್ (ಸುಮಾರು 11 ಕೋಟಿ ರೂ.) ದಂಡವನ್ನು ಬಿಸಿಸಿಐಗೆ ಪಾವತಿಸಿದೆ. ಈ ಕುರಿತು ಪಾಕಿಸ್ತಾನದ ಕ್ರಿಕೆಟ್ ಬೋರ್ಡಿನ ಅಧ್ಯಕ್ಷ ಈಶನ್ ಮಣಿ ಮಾಹಿತಿ ನೀಡಿದ್ದು, 2.2 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ಪಾವತಿ ಮಾಡಿದಿದ್ದೇವೆ ಎಂದು ತಿಳಿಸಿದ್ದಾರೆ. ಪಾಕಿಸ್ತಾನದೊಂದಿಗೆ ದ್ವಿಪಕ್ಷಿಯ ಒಪ್ಪಂದ ಕ್ರಿಕೆಟ್ ಪಂದ್ಯಗಳನ್ನು ಭಾರತ ಆಯೋಜಿಸದ ಕಾರಣ ತನಗೆ ನಷ್ಟವಾಗಿದೆ ಎಂದು ಕಳೆದ ವರ್ಷ ಪಿಸಿಬಿ ದೂರು ದಾಖಲಿಸಿತ್ತು. […]

ಇನಷ್ಟು ಓದಿ

ಕೊಹ್ಲಿ ದೇಶದ ನಂ.1 ಮೌಲ್ಯಯುತ ಸೆಲೆಬ್ರಿಟಿ..!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸತತ ಎರಡನೇ ವರ್ಷವೂ ದೇಶದ ಅತ್ಯಂತ ಮೌಲ್ಯಯುತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೊಹ್ಲಿಯ ಬ್ರ್ಯಾಂಡ್ ಮೌಲ್ಯ 2018ರಲ್ಲಿ ಶೇ.18ರಷ್ಟು ಅಂದರೆ 1253 ಕೋಟಿ ರು.ಗೆ ಏರಿಕೆಯಾಗಿದೆ. 2018ರ ನವೆಂಬರ್ 18ರ ವರೆಗೆ ಕೊಹ್ಲಿ 24 ಬ್ರ್ಯಾಂಡ್‌ಗಳಿಗೆ ಜಾಹೀರಾತು ನೀಡಿದ್ದಾರೆ ಎಂದು ಜಾಗತಿಕ ಮೌಲ್ಯಮಾಪನ ಮತ್ತು ಕಾರ್ಪೊರೇಟ್ ಹಣಕಾಸು ಸಲಹೆಗಾರ ಸಂಸ್ಥೆ ಡಫ್ ಆ್ಯಂಡ್ ಫೆಲಿಪ್ಸ್, ಭಾರತದ ಮೌಲ್ಯಯುತ ಸೆಲೆಬ್ರಿಟಿ ಬ್ರ್ಯಾಂಡ್‌ಗಳ ನಾಲ್ಕನೇ ಆವೃತ್ತಿಯ ವರದಿಯಲ್ಲಿ ತಿಳಿಸಿದೆ. […]

ಇನಷ್ಟು ಓದಿ

3 ದಿನಗಳ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿ- ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಕೋಟೆ ನಾಡಿನಲ್ಲಿ ಆಯೋಜನೆ

ಚಿತ್ರದುರ್ಗ: ವಂದೇ ಮಾತರಂ ಜಾಗೃತಿ ವೇದಿಕೆಯಿಂದ ಕನ್ನಡ ರಾಜ್ಯೋತ್ಸವ, ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ  ಮ್ಯಾಟ್ ಕಬಡ್ಡಿ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಡಿ.7, 8, 9 ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ತಿಳಿಸಿದರು. ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತುಮಕೂರಿನ ಸಿದ್ದಗಂಗಾಮಠದ ಡಾ.ಶಿವಕುಮಾರಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಸಿಗಲೆಂದು ಆಶಯಿಸಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದ್ದು  […]

ಇನಷ್ಟು ಓದಿ