ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 91ನೇ ಮನ್ ಕೀ ಬಾತ್ ಕಾರ್ಯಕ್ರಮದ ಮುಖ್ಯಾಂಶಗಳು.

ನವದೆಹಲಿ – ಕರ್ನಾಟಕದಲ್ಲಿ ಕೆಲ ವಾರಗಳ ಹಿಂದೆ ಅಮೃತ ಭಾರತಿಗೆ  ಕನ್ನಡದಾರತಿ ಹೆಸರಿನ ಒಂದು ವಿಭಿನ್ನ ಅಭಿಯಾನ ನಡೆಸಲಾಯಿತು ಇದರಡಿ ಕರ್ನಾಟಕದ 75 ಸ್ಥಳಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಬಂಧಿತ ಭವ್ಯ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕರ್ನಾಟಕದ ಮಹಾನ್ ಸ್ವಾತಂತ್ರ್. ಸೇನಾನಿಗಳನ್ನು ಸ್ಮರಿಸುವ ಜೊತೆಗೆ ಸ್ಥಳೀಯ ಸಾಹಿತ್ಯಕ ಸಾಧನೆಗಳನ್ನು ಕೂಡ ಮುನ್ನೆಲೆಗೆ ತರುವ ಪ್ರಯತ್ನ ನಡೆಸಲಾಯಿತು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರ ವರೆಗೆ ಹರ್ ಘರ್ ತಿರಂಗಾ

ಎಂಬ ವಿಶೇಷ ಅಭಿಯಾನ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ಭಾಗಿಗಳಾಗುವ ಮೂಲಕ ಆಗಸ್ಟ್ 13 ರಿಂದ 15 ರ ವರೆಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ತಿರಂಗಾ ನಮ್ಮನ್ನು ಬೆಸೆಯುತ್ತದೆ ಮತ್ತು ದೇಶಕ್ಕಾಗಿ ಏನನ್ನಾದರೂ ಮಾಡುವ ಪ್ರೇರಣೆ ನೀಡುತ್ತದೆ.

ಆಗಸ್ಟ್ 2 ರಿಂದ 15 ರ ವರೆಗೆ ನಾವೆಲ್ಲರೂ ನಮ್ಮ ಸಾಮಾಜಿಕ ಜಾಲತಾಣದ ಪ್ರೊಫೈಲ್ ಫೋಟೋನಲ್ಲಿ ತಿರಂಗಾ ಹಾಕಬಹುದು. ತಿರಂಗಾಕ್ಕೆಸಂಬಂಧಿಸಿದಂತೆ ಆಗಸ್ಟ್ 2 ಒಂದು ವಿಶೇಷ ದಿನ. ಈ ದಿನ ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸ ಮಾಡಿದ ಪಿಂಗಳಿ ವೆಂಕಯ್ಯ ಅವರ ಜನ್ಮದಿನ. ಅವರಿಗೆ ಆದರಪೂರ್ವಕ ಶ್ರದ್ಧಾಂಜಲಿ ಅರ್ಪಿಸೋಣ ಹಾಗೂ ಮೇಡಂ ಕಾಮಾ ಅವರನ್ನೂ ಸ್ಮರಿಸೋಣ. ರಾಷ್ಟ್ರಧ್ವಜಕ್ಕೆ ಆಕಾರ ನೀಡುವಲ್ಲಿ ಮೇಡಂ ಕಾಮಾ ಅವರ ಕೊಡುಗೆ ಮಹತ್ವಪೂರ್ಣದ್ದಾಗಿದೆ.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಟ್ಟದಲ್ಲಿ ಮಹತ್ವದ ಪಾತ್ರ ವಹಿಸಿದೆ. ಜಗತ್ತಿನಾದ್ಯಂತ ಆಯುರ್ವೆ ಮತ್ತು ಭಾರತೀಯ ಔಷಧಿಗಳ ಬಗ್ಗೆ ಆಕರ್ಷಣೆ ಹೆಚ್ಚುತ್ತಿದೆ. ಇದೇ ಕಾರಣದಿಂದ ಆಯುಷ್ ರಪ್ಲಿನಲ್ಲೂ ಭಾರಿ ಏರಿಕೆಯಾಗುತ್ತಿದೆ. ಈ ಕ್ಷೇತ್ರದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳ ಮುಂದೆ ಬಂದಿವೆ ಎಂಬುದು ಕೂಡ ಗಮನಾರ್ಹ ಸಂಗತಿ.

ಜೇನಿನ ಸಿಹಿ ನಮ್ಮ ರೈತರ ಜೀವನದಲ್ಲೂ ಬದಲಾವಣೆ ತರುತ್ತಿದೆ. ಜೇನು ರಪ್ತಿನಲ್ಲಿ ಭಾರೀ ವೃದ್ಧಿಯಾಗಿದೆ.

ಕರ್ನಾಟಕದ ರೈತ ಮಧುಕೇಶ್ವರ ಹೆಗಡೆ ಅವರ ಭಾರತ ಸರ್ಕಾರದಿಂದ 50 ಜೇನು ಪೆಟ್ಟಿಗೆಗಳಿಗೆ ಸಬ್ಸಿಡಿ ಪಡೆದಿದ್ದರು. ಇಂದು ಅವರ ಬಳಿ 800 ಕ್ಕೂ ಅಧಿಕ ಜೇನು ಪೆಟ್ಟಿಗೆಗಳಿವೆ. ವಾರ್ಷಿಕವಾಗಿ ಹತ್ತಾರು ಟನ್ ಜೇನು ಮಾರಾಟ ಮಾಡುತ್ತಿದ್ದಾರೆ. ಜೇನಿನಲ್ಲಿ ಹಲವು ಆವಿಷ್ಕಾರಗಳ ಮಾಡಿದ ಅವರ ಯಶಸ್ಸು ಎಲ್ಲರಿಗೂ ಪ್ರೇರಣೆ.

ಭಾರತದ ಆಟಿಕೆ ವಲಯವು ಪರಿವರ್ತನೆಗೊಂಡಿದೆ. ಭಾರತೀಯ ಸ್ನೇಹಿ ಆಟಿಕೆಗಳನ್ನು ತಯಾರಿಸುತ್ತಿದೆ. ದೇಶದ ವಿವಿಧೆಡೆ ಆಟಿಕೆಗಳ ಕುರಿತ ಸ್ಟಾರ್ಟ್‌ಅಪ್‌ಗಳು ಹೆಚ್ಚುತ್ತಿವೆ. ಉತ್ಪಾದಕರು ಇಂದು ಭಾರತದ ಪುರಾಣ, ಇತಿಹಾಸ ಮತ್ತು ಸಂಸ್ಕೃತಿ ಆಧಾರಿತ ಆಟಿಕೆಗಳನ್ನು ನಿರ್ಮಿಸುತ್ತಿರುವುದು ಶ್ಲಾಘನೀಯವಾಗಿದೆ. ಆಟಿಕೆಗಳನ್ನು ತಯಾರಿಸುವ ಸಣ್ಣ ಸಣ್ಣ ಉದ್ಯಮಿಗಳಿಗೆ ಇದರಿಂದ ಸಾಕಷ್ಟು ಲಾಭವಾಗುತ್ತಿದೆ. 2,600 ಕೋಟಿ ಮೌಲ್ಯಕ್ಕೂ ಹೆಚ್ಚು ಆಟಿಕೆಗಳನ್ನು ರಫ್ತು ಮಾಡಲಾಗಿದೆ. ಭಾರತದ ಆಟಿಕೆಗಳ ನಿರ್ಮಾಣಕಾರರು ವಿಶ್ವದ ಪ್ರಮುಖ ಜಾಗತಿಕ ಟಾಯ್ ಬ್ರಾಂಡ್‌ಗಳ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಸ್ಟಾರ್ಟ್‌ಅಪ್ ವಲಯಗಳು ಕೂಡ ಆಟಿಕೆಗಳ ಜಗತ್ತಿಗೆ ಹೆಚ್ಚಿನ ಗಮನ ನೀಡುತ್ತಿದ್ದು, ವಿಶಿಷ್ಟ ಸೃಜನಶೀಲತೆ ಪ್ರದರ್ಶಿಸುತ್ತಿವೆ. ಬೆಂಗಳೂರಿನಲ್ಲಿ ಶುಮ್ಮಿ ಟಾಯ್ಸ್ ಹೆಸರಿನ ಸ್ಟಾರ್ಟ್‌ಅಪ್ ಪರಿಸರ ಸ್ನೇಹಿ ಆಟಿಕೆಗಳನ್ನು ತಯಾರಿಸುತ್ತಿದೆ

ಕೆಲವು ದಿನಗಳ ಹಿಂದೆ ದೇಶದಾದ್ಯಂತ 10 ನೇ ಮತ್ತು 12 ನೇ ತರಗತಿ ಪರೀಕ್ಷೆಗಳ ಫಲಿತಾಂಶ ಘೋಷಣೆಯಾಗಿದೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಅವರು ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸು ಪಡೆದುಕೊಂಡಿದ್ದಾರೆ. ಸಾಂಕ್ರಾಮಿಕ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಹಲವಾರು ಸವಾಲುಗಳು ಎದುರಾದವು. ಇಂತಹ ಪರಿಸ್ಥಿತಿಯಲ್ಲೂ ನಮ್ಮ ಯುವ ಜನತೆ ತಮ್ಮ ಸಾಹಸ ಮತ್ತು ಸಂಯಮ ತೋರಿದ್ದಾರೆ. ಸಹನಶೀಲರಾಗಿರುವ ಈ ವಿದ್ಯಾರ್ಥಿ ಮಿತ್ರರ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು.

 

 

Leave a Reply

Your email address will not be published. Required fields are marked *